ದಾವಣಗೆರೆ: ತಾಲೂಕಿನ ನೇರ್ಲಗಿ ಗ್ರಾಮದಲ್ಲಿ ಸಮುದಾಯವೊಂದರ ಜನರನ್ನು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ನೇರ್ಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಸಮುದಾಯದ ಮುಖಂಡರನ್ನೇ ಟಾರ್ಗೆಟ್ ಮಾಡಿ ಅವರ ಮುಂದೆಯೇ ಬಹಿರಂಗವಾಗಿ ರಾಮಪ್ಪ ನಿಂದಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ನೀವೇ ಅಧಿಕಾರ ಮಾಡಬೇಕಾ? ನಿಮಗೆ ಈಶ್ವರ ಬಂದು ಲಿಂಗ ಕಟ್ಟಿದ್ದಾನಾ? ಈ ಬಾರಿ ಹಿಂದುಳಿದವರಿಗೆ ಅಧಿಕಾರ ಕೊಡಿ ಎಂದು ಧಮ್ಕಿ ಹಾಕಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಪರವಾಗಿರುವ ರಾಮಪ್ಪ ಈ ದುರ್ವರ್ತನೆ ತೋರಿದ್ದಾರೆ ಎನ್ನಲಾಗ್ತಿದೆ. ರಾಮಪ್ಪ ಅವರ ನಡೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.