ETV Bharat / state

ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ

ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ಮಹಿಳಾ ಸದಸ್ಯರಿಲ್ಲ ಎಂದು ಕಾಂಗ್ರೆಸ್​ ಹೇಳಿದ್ದಕ್ಕೆ ಬಿಜೆಪಿ ಮಹಿಳಾ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸಭೆ
ಮಂಗಳೂರು ಮಹಾನಗರ ಪಾಲಿಕೆ ಸಭೆ
author img

By ETV Bharat Karnataka Team

Published : Sep 26, 2023, 5:59 PM IST

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸುದೀರ್ ಕುಮಾರ್ ಶೆಟ್ಟಿ ಅವರ ಮೊದಲ ಪಾಲಿಕೆ ಸಭೆಯಲ್ಲಿ ಅಭಿವೃದ್ಧಿ ವಿಚಾರಗಳಿಗೆ ಹೊರತುಪಡಿಸಿದ ವಿಚಾರವೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಪಾಲಿಕೆ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯ ಲತೀಫ್ ಅವರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕುಳಿತಿರುವ ಸ್ಥಾಯಿ ಸಮಿತಿಯ ಸದಸ್ಯರನ್ನು ನೋಡುವಾಗ ಬೇಜಾರು ಆಗುತ್ತದೆ. ಈ ಸಭೆಯಲ್ಲಿ ಓರ್ವ ಮಹಿಳೆಯರು ಇಲ್ಲದಿರುವುದು ದುರ್ದೈವ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಲ್ಲಿ ಬಿಜೆಪಿಯ ಹಿರಿಯ ಮಹಿಳಾ ಸದಸ್ಯೆ ಶಕೀಲಾ ಕಾವ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಪೋರೇಟರ್ ಗಳು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಈವರೆಗೆ ಮಹಿಳಾ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ಲೇವಡಿ ಮಾಡಿದರು.

ಇನ್ನು ಸಭೆಯ ಆರಂಭದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಮೇಯರ್ ಅವರಿಗೆ ಅಭಿನಂದನೆ ಸಲ್ಲಿಸುವ ಭಾಷಣದಲ್ಲಿ ಚಂದ್ರಯಾನ-3ರ ಯಶಸ್ಸು, ಜಿ 20 ನಡೆಸಿರುವುದು ಮತ್ತು ಕೇಂದ್ರದಲ್ಲಿ ಮಹಿಳಾ ವಿಧೇಯಕವನ್ನು ಜಾರಿಗೊಳಿಸಲಿರುವುದನ್ನು ಪ್ರಸ್ತಾಪಿಸಿದರು. ಶಾಸಕ ವೇದವ್ಯಾಸ ಕಾಮತ್ ಭಾಷಣ ಮುಗಿಸಿ ತೆರಳಿದರು. ಬಳಿಕ ಈ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎ ಸಿ ವಿನಯರಾಜ್, ಶಾಸಕರು ಪಾಲಿಕೆಯ ಸದಸ್ಯರಾಗಿದ್ದು, ಅವರಿಗೆ ನಮ್ಮ ಮಾತನ್ನು ಕೇಳುವ ತಾಳ್ಮೆ ಇಲ್ಲ ಎಂದಾಗ ಬಿಜೆಪಿ ಸದಸ್ಯರನ್ನು ಕೆರಳಿಸಿತು. ಶಾಸಕರಿಗೆ ಅಗೌರವ ತೋರಿದ್ದಾರೆ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು.

ಇತಿಹಾಸ ನಮಗೆ ಬೇಕಿಲ್ಲ ಎಂದ ಬಿಜೆಪಿ ಸದಸ್ಯರು : ಶಾಸಕ ವೇದವ್ಯಾಸ ಕಾಮತ್ ಅವರು ಚಂದ್ರಯಾನದ ಬಗ್ಗೆ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನ ಎ ಸಿ ವಿನಯ ರಾಜ್ ಅವರು ಮಾಜಿ ಪ್ರಧಾನಿ ನೆಹರು ಅವರ ಕೊಡುಗೆಯನ್ನು ಸ್ಮರಿಸಿ ಭಾಷಣ ಆರಂಭಿಸಿದರು. ಆದರೆ ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಮೇಯರ್ ಜಯಾನಂದ ಅಂಚನ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ನಮಗೆ ಇತಿಹಾಸ ಬೇಡ ಎಂಬುದಾಗಿ ಹೇಳಿದರು.

ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಮಂಗಳೂರಿನ ಎಷ್ಟು ಜನರಿಗೆ ಮನೆ ಕೊಟ್ಟಿದೆ. ಎಷ್ಟು ಆಶ್ರಯ ಸಮಿತಿ ಸಭೆ ನಡೆಸಿದೆ ಎಂದು ಪ್ರಶ್ನಿಸಿ ಕುಂಜತ್ ಬೈಲ್ ನಲ್ಲಿರುವ ಮೂರುವರೆ ಎಕರೆ ಜಮೀನಿನಲ್ಲಿ 400 ಮನೆಗಳ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು. ಇನ್ನು ಕಸ ವಿಲೇವಾರಿಗೆ ವಾಹನಗಳನ್ನು ಖರೀದಿಸಿದ್ದು, ಈ ವಾಹನಗಳು ಮಂಗಳೂರಿನ 50 ರಷ್ಟು ರಸ್ತೆಗಳಿಗೆ ತೆರಳಲು ಆಗುತ್ತಿಲ್ಲ. ಕೆಲವು ವಾಹನಗಳಿಗೆ ಡ್ರೈವರ್ ನೇಮಕವಾಗಿಲ್ಲ ಎಂದರು.

ಕಾಂಗ್ರೆಸ್​ನ ಲ್ಯಾನ್ಸಿ ಲಾಟ್ ಪಿಂಟೋ ಮಾತನಾಡಿ, ಈ ಬಾರಿ ನೀರಿನ ಸಮಸ್ಯೆ ಎದುರಾಗಲಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಮೇಯರ್ ಈ ಬಗ್ಗೆ ಮೀಟಿಂಗ್ ಕರೆದು ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.