ದಾವಣಗೆರೆ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ದಾವಣಗೆರೆಗೆ ಬಾರದಿರಲಿ ಎಂದು ಪ್ರಾರ್ಥಿಸಿ ಮಾರ್ವಾಡಿ ಸಮುದಾಯದ ಮಹಿಳೆಯರು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಗುಳ್ಳಮ್ಮ ದೇವಾಲಯದ ಪಾರ್ಕ್ನಲ್ಲಿ ಸೇರಿದ ಮಹಿಳೆಯರು ಭಜನೆ ಮಾಡುವ ಮೂಲಕ ದೇವರಲ್ಲಿ ಪ್ರಾರ್ಥಿಸಿದರು. ಕೊರೊನಾ ಬಾರದಿರಲಿ. ಇದರಿಂದ ಯಾರಿಗೂ ತೊಂದರೆ ಆಗದಿರಲಿ ಎಂದು ದೇವರಲ್ಲಿ ಬೇಡಿಕೊಂಡರು.
ವಿಶ್ವಾದ್ಯಂತ ಹರಡುತ್ತಿರುವ ಈ ಮಾರಕವಾದ ವೈರಸ್ ವಿರುದ್ಧ ಹೋರಾಡಬೇಕಾದ ಸನ್ನಿವೇಶ ಎದುರಾಗಿದೆ. ಈ ಸೋಂಕು ಯಾರಿಗೂ ಬಾರದಿರಲಿ. ಭಗವಂತ ನಮ್ಮನ್ನು ಕಾಪಾಡಲಿ ಎಂದು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ಹೇಳಿದರು.