ದಾವಣಗೆರೆ: ಕಾಳ್ಗಿಚ್ಚು ಮುಸುಕಿನ ಜೋಳಕ್ಕೆ ಹತ್ತಿಕೊಂಡಿದ್ದು, ಇಡೀ ರಾಶಿ ಸುಟ್ಟು ಕರಕಲಾಗಿರುವ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.
ಸಾಸ್ವೆಹಳ್ಳಿಯಿಂದ ಕೂಗಳತೆ ದೂರದಲ್ಲಿರುವ ಮಾವಿನಕಟ್ಟೆ ಗುಡ್ಡದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದು ಹಂತ ಹಂತವಾಗಿ ಹೊತ್ತಿಕೊಂಡು ಬಂದ ಬೆಂಕಿ ರೈತರ ಜಮೀನುಗಳಲ್ಲಿದ್ದ ಫಸಲಿಗೆ ಆವರಿಸಿಕೊಂಡಿದೆ. ಪರಿಣಾಮ ಸುಮಾರು 22 ಎಕರೆಯಲ್ಲಿ ಬೆಳೆದು ರಾಶಿ ಹಾಕಿದ್ದ ಮೆಕ್ಕೆಜೋಳಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಮಂಜಪ್ಪ, ಜಯರಾಮ್, ಸುವರ್ಣಮ್ಮ, ಹಾಲೇಶಪ್ಪ ಎಂಬವರಿಗೆ ಸೇರಿದ ಬೆಳೆ ಹಾನಿಗೀಡಾದ್ದು, ಆಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿದೆ. ಆದರೆ ಆ ವೇಳೆಗಾಗಲೇ ಮೆಕ್ಕೆಜೋಳಗಳು ಸುಟ್ಟು ಕರಲಾಗಿವೆ.
ಸಾಕಷ್ಟು ನಷ್ಟಕ್ಕೊಗಳಗಾದ ರೈತರು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.