ETV Bharat / state

ಮಾಜಿ‌ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ

ಕಲ್ಲೇಶ್ವರ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರನ್ನು ಮೊದಲ(A1) ಆರೋಪಿಯನ್ನಾಗಿ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ್ದಾರೆ.

wild-animal-found-in-ministers-farm-house-bjp-besieged-the-forest-office
ಮಾಜಿ‌ ಸಚಿವರ ರೈಸ್ ಮಿಲ್ ನಲ್ಲಿ ವನ್ಯ ಜೀವಿಗಳ‌ ಪತ್ತೆ ಪ್ರಕರಣ : ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಬಿಜೆಪಿ
author img

By

Published : Dec 29, 2022, 3:40 PM IST

Updated : Dec 29, 2022, 4:12 PM IST

ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ

ದಾವಣಗೆರೆ : ರೈಸ್ ಮಿಲ್‌ (ಫಾರ್ಮ್ ಹೌಸ್)ನಲ್ಲಿ ವನ್ಯ ಜೀವಿಗಳ‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರನ್ನು ಎ1 ಆರೋಪಿ ಮಾಡದೇ ಇರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದೆ. ಈ ಪ್ರಕರಣದಲ್ಲಿ ಬೇರೊಬ್ಬರನ್ನು ಆರೋಪಿಗಳನ್ನಾಗಿ ಮಾಡಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಅರಣ್ಯಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಹಿರಿಯ ಮುಖಂಡ ಯಶವಂತ್ ರಾವ್ ಜಾಧವ್ ಹಾಗೂ ಮಾಜಿ ದೂಡ ಅಧ್ಯಕ್ಷ ರಾಜನಹಳ್ಳಿ ಶಿವವಕುಮಾರ್, ಮಾಜಿ ಮೇಯರ್ ಎಸ್ಟಿ ವೀರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರಕರಣದಲ್ಲಿ ಮಾಜಿ ಸಚಿವರನ್ನು ಅರಣ್ಯಾಧಿಕಾರಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಿಸೆಂಬರ್ 21 ರಂದು ಕಲ್ಲೇಶ್ವರ ಮಿಲ್‌ ಮೇಲೆ ಸಿಸಿಬಿ ಹಾಗು ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿತ್ತು. ಈ ವೇಳೆ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡು ಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಮಾಜಿ ಸಚಿವರಿಗೆ ಸೇರಿದ ಕಲ್ಲೇಶ್ವರ ಮಿಲ್‌ನಲ್ಲಿ ಇವು ಪತ್ತೆಯಾಗಿದ್ದರೂ ಕೂಡ ಎ1 ಆರೋಪಿಯನ್ನಾಗಿ ಮಾಡುವಲ್ಲಿ ಅರಣ್ಯಾಧಿಕಾರಿ ಹಿಂದೇಟು ಹಾಕಿದ್ದಾರೆ. ಬದಲಾಗಿ ಮಿಲ್‌ನಲ್ಲಿ ಕೆಲಸ ಮಾಡುವ ಸಂಪಣ್ಣ, ಕರಿಬಸವಯ್ಯ ಎಂಬುವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ಪ್ರಕರಣ ಸಂಬಂಧ ಮಾಜಿ‌ ಸಚಿವರನ್ನು ಎ1 ಆರೋಪಿಯಾಗಿ ಮಾಡಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಒತ್ತಾಯಿಸಿದರು.

ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ, ಅರಣ್ಯಾಧಿಕಾರಿಯೇ ಬಂದು ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದರು.

ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ: ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾದ ಕೃಷ್ಣಮೃಗ, ಜಿಂಕೆ ಸೇರಿ ಒಟ್ಟು 30 ವನ್ಯಜೀವಿಗಳನ್ನು ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ: ಫಾರ್ಮ್ ಹೌಸ್​ನಲ್ಲಿ ವನ್ಯಜೀವಿಗಳು ಪತ್ತೆ: ನಿರೀಕ್ಷಣಾ ಜಾಮೀನಿಗಾಗಿ ಆರೋಪಿಗಳಿಂದ ಅರ್ಜಿ

Last Updated : Dec 29, 2022, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.