ETV Bharat / state

ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತೆ ವಹಿಸಲಾಗಿದೆ: ಮಹಾಂತೇಶ್ ಬೀಳಗಿ - ದಾವಣಗೆರೆಯಲ್ಲಿ ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ

ಕೋಳಿ ಮರಿಗಳ ರಫ್ತು ಹಾಗೂ ಆಮದುಗಳ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದು, ಹಕ್ಕಿಯಿಂದ‌ ಹಕ್ಕಿಗೆ ಬರುವ ಈ ಜ್ವರವನ್ನು ತಡೆಯಲು ಎಷ್ಟೇ ಕ್ರಮಗಳನ್ನು ತೆಗೆದುಕೊಂಡರು ಕಮ್ಮಿನೇ, ಅದ್ರೇ ಎಲ್ಲ ಜಿಲ್ಲಾ ಗಡಿಗಳಲ್ಲು ಸಿದ್ಧತೆ ನಡೆದಿದೆ‌ ಎಂದು ಸ್ಪಷ್ಟಪಡಿಸಿದರು.

DC Mahantesh Bilagi
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
author img

By

Published : Jan 8, 2021, 7:19 AM IST

ದಾವಣಗೆರೆ: ರಾಜ್ಯದಲ್ಲಿ ಭಯ ಸೃಷ್ಟಿ ಮಾಡಿರುವ ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ‌.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಇಲಾಖೆ ಹಾಗೂ ಎಲ್ಲಾ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ‌. ಕಳೆದ‌ ವರ್ಷ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ ಎಂಬ ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಕೊಂಡಿತ್ತು. ಅಲ್ಲಿ ಬಫರ್ ಝೋನ್ ನಿರ್ಮಿಸಿ ಕ್ರಮಕ್ಕೆ ಮುಂದಾಗಿದ್ದೆವು.

ಆದರೆ, ಇದೀಗ ಮತ್ತೇ ಆ ಜ್ವರ ಬರದೇ ಇರುವುದಕ್ಕೆ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಹೇಳಿದ್ದೀವೆ. ಕೋಳಿ ಮರಿಗಳ ರಫ್ತು ಹಾಗೂ ಆಮದುಗಳ ಸ್ಥಳಗಳನ್ನು ಗುರಿತಿಸಿ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದು, ಹಕ್ಕಿಯಿಂದ‌ ಹಕ್ಕಿಗೆ ಬರುವ ಈ ಜ್ವರವನ್ನು ತಡೆಯಲು ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ಕಮ್ಮಿನೇ, ಅದ್ರೇ ಎಲ್ಲಾ ಜಿಲ್ಲಾ ಗಡಿಗಳಲ್ಲು ಸಿದ್ಧತೆ ನಡೆದಿದೆ‌ ಎಂದು ಸ್ಪಷ್ಟಪಡಿಸಿದರು.

ಓದಿ : ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದ ಕೋಳಿ ಸಾಗಣೆ ನಿರ್ಬಂಧ: ಜಿಲ್ಲಾಧಿಕಾರಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.