ETV Bharat / state

ಮಿತ್ರಮಂಡಳಿ ಶಾಸಕರೆಲ್ಲಾ ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ : ಸಚಿವ ಭೈರತಿ ಬಸವರಾಜ್

ರಮೇಶ್ ಜಾರಕಿಹೊಳಿ ಶೀಘ್ರದಲ್ಲಿ ಆರೋಪ ಮುಕ್ತರಾಗಲಿದ್ದಾರೆ. ಆರೋಪ ಮುಕ್ತರಾದ ನಂತರ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಮೊದಲಿನಿಂದಲೂ ನಾವೆಲ್ಲ ಅವರ ಬೆಂಬಲಕ್ಕಿದ್ದೇವೆ. ಈಗಲು ಅವರ ಜೊತೆಗಿದ್ದೇವೆ..

bhairathi-basavaraj
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್
author img

By

Published : Jun 29, 2021, 5:13 PM IST

ದಾವಣಗೆರೆ : ಸಿಡಿ ಪ್ರಕರಣದಲ್ಲಿ ಭಾಗಿಯಾಗಿ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತುಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದು, ಮಿತ್ರಮಂಡಳಿ ಶಾಸಕರೆಲ್ಲಾ ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಯಾವುದೋ ಉದ್ವೇಗದಲ್ಲಿ ಹೇಳಿದ್ದು, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅವರ ಸಹೋದರರು ಅವರನ್ನು ಸಮಾಧಾನ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಶೀಘ್ರದಲ್ಲಿ ಆರೋಪ ಮುಕ್ತರಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರ ಕುರಿತಂತೆ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯೆ..

ಆರೋಪ ಮುಕ್ತರಾದ ನಂತರ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಮೊದಲಿನಿಂದಲೂ ನಾವೆಲ್ಲ ಅವರ ಬೆಂಬಲಕ್ಕಿದ್ದೇವೆ. ಈಗಲು ಅವರ ಜೊತೆಗಿದ್ದೇವೆ ಎಂದು ತಿಳಿಸಿದರು. ಇನ್ನು, ಅವರಲ್ಲಿ ಅಸಮಾಧಾನ ಇದೆ ಎಂಬ ಹೆಚ್ ಎಂ ರೇವಣ್ಣರವರ ಹೇಳಿಕೆಗೆ ಪ್ರತಿಕ್ರಿಯಿಸಿ, ರೇವಣ್ಣನವರೇನು ಜ್ಯೋತಿಷ್ಯ ಓದಿಕೊಂಡಿದ್ದಾರಾ? ನಮ್ಮಲ್ಲಿ‌ ಅಸಮಾಧಾನ ಇದೆ ಇಲ್ಲ ಎಂದು ಹೇಳಲು, ಅವರ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ: ರಾಜ್ಯದಲ್ಲಿ Corona ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್​ ಸ್ಪಷ್ಟನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.