ETV Bharat / state

ದಾವಣಗೆರೆಯ 28 ಕಡೆಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ: ಜಿಲ್ಲಾ ಸರ್ವೇಕ್ಷಣಾ ಇಲಾಖೆ ವರದಿ

author img

By

Published : Aug 16, 2023, 8:24 PM IST

Davanagere drinking water: ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಇಲಾಖೆ ಜಿಲ್ಲೆಯ ಹಲವು ಸ್ಥಳಗಳ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆಗೊಳಪಡಿಸಿತ್ತು.

Water in 28 places is not fit for drinking
ಜಿಲ್ಲೆಯಾದಂತ್ಯ ಕುಡಿಯುವ ನೀರು ಪರೀಕ್ಷಿಸುತ್ತಿರುವ ಜಿಲ್ಲಾ ಸರ್ವೇಕ್ಷಣ ಇಲಾಖೆ
ದಾವಣಗೆರೆಯ 28 ಕಡೆ ನೀರು ಕುಡಿಯಲು ಯೋಗ್ಯವಲ್ಲ: ವರದಿ

ದಾವಣಗೆರೆ: ಚನ್ನಗಿರಿಯ ಸೂಳೆಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ತಕ್ಷಣ ಎಚ್ಚೆತ್ತುಕೊಂಡಿರುವ ಜಿಲ್ಲಾ ಸರ್ವೇಕ್ಷಣಾ ಇಲಾಖೆ ಜಿಲ್ಲೆಯ ಬೇರೆ ಬೇರೆ ಕಡೆಗಳ ನೀರು ಪರೀಕ್ಷೆ ಮಾಡುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 250ಕ್ಕೂ ಹೆಚ್ಚು ಕಡೆ ನೀರು ಪರೀಕ್ಷೆ ಮಾಡಲಾಗಿದ್ದು, ಆತಂಕಕಾರಿ ವರದಿ ಹೊರಬಿದ್ದಿದೆ.

ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 60,154 ವಿವಿಧ ಭಾಗದಲ್ಲಿ ನೀರಿನ ಪರೀಕ್ಷೆ ಮಾಡಿದ್ದು, ಅದರಲ್ಲಿ 28 ಕಡೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಗ್ರಾಮಗಳಲ್ಲಿ ಕುಡಿಯುವ ನೀರು ಸ್ಥಗಿತಗೊಳಿಸಿ ಸ್ವಚ್ಛಗೊಳಿಸಿದ ಬಳಿಕ ಕುಡಿಯಲು ನೀರು ನೀಡಿರುವ ಘಟನೆ ನಡೆದಿದೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಬಾವಿ, ಬೋರ್​ವೆಲ್, ಟ್ಯಾಂಕ್​ಗಳು, ಕೆರೆಗಳು, ಎಲ್ಲೆಲ್ಲಿ ಕುಡಿಯುವ ನೀರಿನ ಮೂಲ ಇದೆಯೋ, ಅಂತಹ ನೀರನ್ನು ಜಿಲ್ಲಾ ಸರ್ವೇಕ್ಷಣಾ ಇಲಾಖೆ ಪರೀಕ್ಷೆ ಮಾಡುತ್ತಿದೆ. ಸೂಳೆಕೆರೆ ಪ್ರಕರಣಕ್ಕೂ ಮುನ್ನವೇ ಸರ್ವೇಕ್ಷಣಾ ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ಈ ಕುಡಿಯುವ ನೀರನ್ನು ಸರ್ವೇಕ್ಷಣಾ ಮಾಡಿ ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ಚನ್ನಗಿರಿಯ ಸೂಳೆಕೆರೆ ಪ್ರಕರಣ ನಡೆದಿದ್ದರಿಂದ ಆಯಾಯ ಗ್ರಾಮಗಳಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಯಾವುದಾದರೂ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ತಕ್ಷಣ ಗ್ರಾ.ಪಂ ಗಮನಕ್ಕೆ ತಂದು ಕುಡಿಯುವ ನೀರಿನ ಮೂಲ ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಡಿಹೆಚ್‌ಒ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಧಿಕಾರಿ ನಾಗರಾಜ್ ಹೇಳಿಕೆ: ಚನ್ನಗಿರಿಯ ಶಾಂತಿ ಸಾಗರದ ನೀರು ಚನ್ನಗಿರಿ ಪಟ್ಟಣ ಸೇರಿದಂತೆ ಚನ್ನಗಿರಿ ತಾಲೂಕಿನ 12ರಿಂದ 14 ಗ್ರಾಮ ಪಂಚಾಯಿತಿಗಳಿಗೆ ಪೂರೈಕೆಯಾಗುತ್ತಿದೆ. ಇಲ್ಲಿನ ನೀರು ಪರೀಕ್ಷೆ ಮಾಡಿದಾಗ ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಈ ನೀರಿನಲ್ಲಿ ಬ್ಯಾಕ್ಟೀರಿಯಾಲಿಜಿಕಲ್ ಗ್ರೋತ್ (ಹೈಡ್ರೋಜನ್ ಸಲ್ಫೈಡ್) ಬ್ಯಾಕ್ಟೀರಿಯಾ ಇದೆ ಎಂದು ವರದಿ ಹೇಳಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು?: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಗ್ಗೆ ಮಾತನಾಡಿ, "ಈಗಾಗಲೇ ಸೂಳೆಕೆರೆಗೆ ತ್ಯಾಜ್ಯ ಬಂದು ಸೇರುತ್ತಿದೆ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ. ಆ ತ್ಯಾಜ್ಯವನ್ನು ಡೈವರ್ಟ್ ಮಾಡಲು, ತಡೆಯಲು ಸರ್ವೇ ಮಾಡಲು ಕ್ರಮ ವಹಿಸುತ್ತಿದ್ದೇವೆ. ಇದರ ಬಗ್ಗೆ ಪಾಂಡೋಮಟ್ಟಿ ಶ್ರೀಗಳು ನನ್ನ ಗಮನಕ್ಕೆ ತಂದಿದ್ದು, ಅವರು ಕೂಡ ಈ ಸಮಸ್ಯೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಇಲ್ಲಿಂದ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ವರದಿ ಕೂಡ ಬಂದಿರುವುದರಿಂದ ಸರ್ವೇ ಮಾಡುತ್ತೇವೆ. ಮತ್ತೊಂದು ವರದಿ ಶಿವಮೊಗ್ಗದಿಂದ ಬರಬೇಕಾಗಿದೆ. ಲ್ಯಾಬ್ ವರದಿ ಬಂದ ತಕ್ಷಣ ಕ್ರಮ ವಹಿಸುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಸೂಳೆಕೆರೆ ನೀರು ಸೇವಿಸಲು ಯೋಗ್ಯವಲ್ಲ: ಜಿಲ್ಲಾ ಸರ್ವೇಕ್ಷಣ ಇಲಾಖೆ ಪರೀಕ್ಷಾ ವರದಿಯಿಂದ ಬಹಿರಂಗ.. ಕೆಲ ದಿನಗಳ ಕಾಲ ನೀರು ಪೂರೈಕೆ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.