ದಾವಣಗೆರೆ: ಇಲ್ಲಿನ ಚಮನ್ ಷಾ ವಲಿ ದರ್ಗಾದ ಉರುಸ್‌ನಲ್ಲಿ ಕಮಿಟಿಯವರು ವ್ಯಾಪಾರ ಮಾಡಲು ಪ್ರತಿ ಕೋಮಿನವರಿಗೂ ಮುಕ್ತ ಅವಕಾಶ ಕಲ್ಪಿಸಿ ಭಾವ್ಯಕ್ಯತೆಯ ಸಂದೇಶ ಸಾರಿದ್ದಾರೆ.
ಹಳೇಬಾತಿ ಗ್ರಾಮದಲ್ಲಿ ನೆಲೆಸಿರುವ ಬಾಬಾ ಚಮನ್ ಷಾ ವಲಿ ದರ್ಗಾಕ್ಕೆ ಹಿಂದೂ ಮುಸ್ಲಿಂ ಭಕ್ತರು ಶ್ರದ್ದಾ ಭಕ್ತಿಯಿಂದ ನಮಿಸುವುದು ವಿಶೇಷ. ಏಳು ವಾರಗಳ ಕಾಲ ಜರುಗುವ ಉರುಸ್‌ನಲ್ಲಿ ಹಳೇಬಾತಿ ಗ್ರಾಮದ ಪವಾಡ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳಿ ಗೌಡರ ಮನೆಯಿಂದ ಗಂಧ ಬಂದ ನಂತರ ಮುಸ್ಲಿಮರ ಮನೆಗಳಿಂದ ಗಂಧ ಬರುವುದು ವಾಡಿಕೆ. ಇದಲ್ಲದೇ ಈ ದರ್ಗಾಕ್ಕೆ ಮುಸ್ಲಿಮರೊಂದಿಗೆ ಹಿಂದೂಗಳಿಗೆ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ದರ್ಗಾ ನೋಡಿಕೊಳ್ಳುವ ಸೈಯ್ಯದ್ ಸಾದೀಕ್ ಚಿಸ್ತಿ ತಿಳಿಸಿದರು.
ಚಮನ್ ಷಾವಲಿ ಬಾಬಾರ ಪವಾಡ: ಭಕ್ತರು ತಾವು ಬೇಡಿಕೊಂಡ ಇಷ್ಟಾರ್ಥಗಳು ಸಿದ್ದಿಯಾದಾಗ ಇಲ್ಲಿಗೆ ಆಗಮಿಸಿ ಹರಕೆ ತೀರಿಸುತ್ತಾರೆ. ಐದು ಗುರುವಾರ ಇಲ್ಲಿ ಹರಕೆ ಕಟ್ಟಿಕೊಂಡರೆ ಹರಕೆ ಪೂರ್ತಿಯಾಗುತ್ತೆ ಎಂದು ಹೇಳಲಾಗುತ್ತದೆ. ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಹಾವೇರಿ, ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ, ಬಿಹಾರದಿಂದ ದರ್ಗಾಕ್ಕೆ ಭಕ್ತರು ಭೇಟಿ ನೀಡುತ್ತಾರೆ.
ಇದನ್ನೂ ಓದಿ:ದಾವಣಗೆರೆ: ಶಾಲಾ ಜಾಗ ಒತ್ತುವರಿ ತೆರವುಗೊಳಿಸಿ ತಹಶೀಲ್ದಾರ್ ಖಡಕ್ ಕ್ರಮ