ETV Bharat / state

ಎರಡು ಪ್ರತ್ಯೇಕ ಅಪಘಾತ ಪ್ರಕರಣ, ಸ್ಥಳದಲ್ಲೇ ನಾಲ್ವರು ಸಾವು, ಹಲವರಿಗೆ ತೀವ್ರ ಗಾಯ

ಪ್ರತ್ಯೇಕ ಘಟನೆಗಳಲ್ಲಿ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ‌ ಬೈಕ್​ ನಿಯಂತ್ರಣ ತಪ್ಪಿ ರಭಸವಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಟಾಟಾ ಗೂಡ್ಸ್ ಹಾಗೂ ಕಾರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕಲಘಟಗಿ ತಾಲೂಕು ಧಾರವಾಡ ಕ್ರಾಸ್ ಬಳಿ ನಡೆದಿದೆ.

Accident
ಅಪಘಾತ
author img

By

Published : May 19, 2023, 10:36 PM IST

ಗದಗ: ಬೈಕ್​ ನಿಯಂತ್ರಣ ತಪ್ಪಿ ರಭಸವಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ‌ ನಡೆದಿದೆ. ಶ್ರೀಧರ ಗಡಗಿ (15) ಹಾಗೂ ಅನುಪಕುಮಾರ ಇಟಗಿ (16) ಮೃತ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡಿದ್ದ ಸವಾರ್ ಮೌನೇಶ ಎಂಬಾತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಬ್ಬಿಗೇರಿ ಗ್ರಾಮದಿಂದ ರೋಣ ಪಟ್ಟಣಕ್ಕೆ ಒಂದೇ ಬೈಕ್ ನಲ್ಲಿ ಮೂವರು ಸವಾರರು ತೆರಳುತ್ತಿದರು. ಮಾರ್ಗ‌ ಮಧ್ಯೆ ನಿಯಂತ್ರಣಕ್ಕೆ ಸಿಗದ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.

ಭೀಕರ ರಸ್ತೆ ಅಪಘಾತ: ಸ್ಥಳದಲ್ಲಿಯೇ ಇಬ್ಬರ ಸಾವು(ಹುಬ್ಬಳ್ಳಿ): ಟಾಟಾ ಗೂಡ್ಸ್ ವಾಹನ ಮತ್ತು ಕಾರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿ ನಿವಾಸಿ ಫ್ರಾನ್ಸಿಸ್ ಗೊನ್ಸಾಲ್ವಿಜ್(73 ), ಓಲಿವಿಯಾ ಕ್ಯಾಥರೀನ್(36) ಮೃತ ದುರ್ದೈವಿಗಳಾಗಿದ್ದಾರೆ.

ಟಾಟಾ ಗೂಡ್ಸ್ ವಾಹನ ಮತ್ತು ಕಾರು ಮಧ್ಯೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಇಬ್ಬರು ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯಗಳಾಗಿವೆ. ಫ್ರಾನ್ಸಿಸ್ ಪತ್ನಿ ಲೀನಾ, ಪುತ್ರ ಏಲೆನ್, ಮೊಮ್ಮಕ್ಕಳಾದ ಜೋರ್ಡನ್, ಶುವಾ ಹಾಗೂ ಗೂಡ್ಸ್ ವಾಹನ ಚಾಲಕ ಗಣೇಶ ಖನ್ನಾ ಗೌಡಾಗೆ ಗಂಭೀರ ಗಾಯವಾಗಿದೆ.

ಹುಬ್ಬಳ್ಳಿಯಿಂದ ಕಲಘಟಗಿಯತ್ತ ಹೊರಟಿದ್ದ ಕಾರು ಹಾಗೂ ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಂಟರಗಾಳಿಗೆ ಹಾರಿ ಹೋದ ಮನೆ ಚಾವಣಿ, ಅಪಾರ ನಷ್ಟ- (ಮೈಸೂರು): ಇನ್ನು ಸುಂಟರಗಾಳಿಗೆ ಮನೆ ಮತ್ತು ಅಂಗಡಿಗಳ ಚಾವಣಿ ಹಾರಿ ಹೋಗಿರುವ ಘಟನೆ ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಗೆಜ್ಜಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾತ್ರಿಯ ಸಮಯದಲ್ಲಿ ಜೋರಾಗಿ ಬೀಸಿದ ಸುಂಟರಗಾಳಿಗೆ ಸುಮಾರು ಐದು ಮನೆಗಳು ಮತ್ತು ಅಂಗಡಿಗಳ ಚಾವಣಿ ಮುರಿದು ಬಿದ್ದಿವೆ. ಗ್ರಾಮದ ನಿಂಗರಾಜು, ಚೆಲುವರಾಯ, ನಂಜುಂಡೇಗೌಡ, ಸಿದ್ದಾಚಾರಿ, ಸಿದ್ದಮ್ಮ, ರಾಜೇಶ್ ಅವರಿಗೆ ಸೇರಿದ ಸುಮಾರು ಐದು ಮನೆಗಳ ಚಾವಣಿ ಹಾರಿ ಹೋಗಿ ಗೋಡೆಗಳು ಕುಸಿದು ಬಿದ್ದಿವೆ. ಅಂಗಡಿಯಲ್ಲಿದ್ದ ದವಸ ಧಾನ್ಯಗಳು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದು ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಸ್ಥಳಕ್ಕೆ ತಾಯೂರು ಗ್ರಾಮ ಪಂಚಾಯಿತಿ ಸದಸ್ಯ ವಿಟ್ಟಲ್, ಶಿವಣ್ಣ, ರಾಜೇಶ್, ಸ್ವಾಮಿ ಅಂಕಶಟ್ಟಿ, ಬಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಅನುಭವಿಸಿದ ಮನೆಯ ನಿವಾಸಿಗಳು ಪರಿಹಾರ ನೀಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಿ,ಸೂಕ್ತ ಪರಿಹಾರವನ್ನು ನೀಡುತ್ತೇವೆ ಎಂದು ಗ್ರಾಪಂ ಸದಸ್ಯರು ಭರವಸೆ ನೀಡಿದ್ದಾರೆ.

ಇದನ್ನೂಓದಿ:ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ತಾಯಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಕಡಪ ಸಂಸದ ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.