ದಾವಣಗೆರೆ: ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಹಾಗೂ ಬಾಲಕ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಸೋಮನಾಳ್ ಗ್ರಾಮದಲ್ಲಿ ನಡೆದಿದೆ.
24 ವರ್ಷದ ರಂಗಸ್ವಾಮಿ ಹಾಗೂ 15 ವರ್ಷದ ಚಿನ್ಮಯ್ ಮೃತರು. ಸೋಮನಾಳ್ ಗ್ರಾಮದ ಭದ್ರಾ ಮುಖ್ಯ ನಾಲೆಯ ಬೆಳ್ಳಿಗನೂಡು ಗ್ರಾಮದ ಕಡೆಗೆ ಹರಿಯುವ ಕಿರುನಾಲೆಯಲ್ಲಿ ಈಜಲು ಮೂವರು ಇಳಿದಿದ್ದರು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಯುವಕ ಗಗನ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತದೇಹಗಳು ಸಿಗದ ಕಾರಣ ಸಂತೇಬೆನ್ನೂರು ಎಸ್.ಐ. ಶಿವರುದ್ರಪ್ಪ ನಾಲೆಯಲ್ಲಿ ನೀರು ನಿಲ್ಲಿಸುವಂತೆ ಮನವಿ ಮಾಡಿದ್ದರು. ನೀರಿನ ಹರಿವು ಸ್ಥಗಿತಗೊಂಡ ಬಳಿಕ ಮೃತದೇಹಗಳು ಪತ್ತೆಯಾಗಿದ್ದು, ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.