ETV Bharat / state

ಕೆರೆಯಲ್ಲಿ ನೀರು ಕುಡಿಯಲು ಇಳಿದ ಎತ್ತುಗಳು ನೀರು ಪಾಲು.. ಕಣ್ಣೆದುರೇ ಮುಳುಗುತ್ತಿದ್ರೂ ಏನೂ ಮಾಡಲಾಗದ ಸ್ಥಿತಿ..

ಕೆರೆ ಏರಿಯ ಮೇಲೆ ಸಾಕಷ್ಟು ಜನ ಇದ್ದರೂ ತಕ್ಷಣವೇ ಇಳಿದು ರಕ್ಷಿಸಲು ಸಾಧ್ಯವಾಗಲಿಲ್ಲ. ಮುಳುಗುತ್ತಿದ್ದ ಎತ್ತುಗಳನ್ನು ರಕ್ಷಿಸಲು ನೀರಿಗಿಳಿದ್ರೂ ಪ್ರಯತ್ನ ಫಲ ನೀಡಲಿಲ್ಲ..

Two oxen drowned in lake when they entered to drink water
ಕಣ್ಣೆದರೇ ಪ್ರಾಣ ಬಿಟ್ಟ ಜೋಡೆತ್ತು
author img

By

Published : Jan 27, 2021, 8:38 PM IST

Updated : Jan 27, 2021, 9:23 PM IST

ದಾವಣಗೆರೆ : ನೀರು ಕುಡಿಯಲೆಂದು ಕೆರೆಗೆ ಇಳಿದ ಎತ್ತುಗಳು ಈಜಲಾಗದೆ ಜನರ ಮುಂದೆಯೇ ಪ್ರಾಣ ಬಿಟ್ಟ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆದಿದೆ.

ಕತ್ತಿಗೆ ಗ್ರಾಮದ ರೈತ ಮಹಾಲಿಂಗಪ್ಪ ಎಂಬುವರಿಗೆ ಸೇರಿದ 2 ಎತ್ತುಗಳು ಸಾವನಪ್ಪಿವೆ. ಇದರಿಂದಾಗಿ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಎತ್ತುಗಳು ಗದ್ದೆಯಿಂದ ಬಂದು ನೀರು ಕುಡಿಯಲು ಕೆರೆಗೆ ಇಳಿದಿವೆ. ಆದರೆ, ಆಳ ಹೆಚ್ಚಾಗಿದ್ದರಿಂದ ಈಜಲಾಗದೆ ಮುಳುಗಿ ಜನರ ಮುಂದೆಯೇ ಸಾವನಪ್ಪಿವೆ.

ಕೆರೆಯಲ್ಲಿ ನೀರು ಕುಡಿಯಲು ಇಳಿದ ಎತ್ತುಗಳು ನೀರು ಪಾಲು

ಕೆರೆ ಏರಿಯ ಮೇಲೆ ಸಾಕಷ್ಟು ಜನ ಇದ್ದರೂ ತಕ್ಷಣವೇ ಇಳಿದು ರಕ್ಷಿಸಲು ಸಾಧ್ಯವಾಗಲಿಲ್ಲ. ಮುಳುಗುತ್ತಿದ್ದ ಎತ್ತುಗಳನ್ನು ರಕ್ಷಿಸಲು ನೀರಿಗಿಳಿದ್ರೂ ಪ್ರಯತ್ನ ಫಲ ನೀಡಲಿಲ್ಲ. ಸ್ಥಳಕ್ಕೆ ಹೊನ್ನಾಳಿ ಪೊಲೀಸರು, ಪಶು ವೈಧ್ಯಾಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಿತಿಗೆ ಸಡಿಲಿಕೆ: ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

Last Updated : Jan 27, 2021, 9:23 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.