ETV Bharat / state

ಕದರನಹಳ್ಳಿ ಕ್ರಾಸ್​​​​​​ ಬಳಿ ಬೈಕ್​ಗಳ ನಡುವೆ ಡಿಕ್ಕಿ: ಇಬ್ಬರು ಸಾವು - ಹದಡಿ

ದಾವಣಗೆರೆಯಿಂದ ತ್ಯಾವಣಿಗೆ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎದುರಿನ ಬೈಕ್‌ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ.

davanagere
ಕದ್ರನಹಳ್ಳಿ ಕ್ರಾಸ್​ ಬಳಿ ಬೈಕ್​ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
author img

By

Published : Dec 12, 2019, 9:12 AM IST

ದಾವಣಗೆರೆ: ಬೈಕ್​​ಗಳ ನಡುವೆ ಡಿಕ್ಕಿ ಸಂಭವಿಸಿ ಬಳಿಕ ಹಿಂದಿನಿಂದ ಬಂದ ಲಾರಿ ರಸ್ತೆ ಮೇಲೆ ಬಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಸಮೀಪದ ಕದರನಹಳ್ಳಿ ಕ್ರಾಸ್ ಬಳಿ‌ ನಡೆದಿದೆ.

ಮಿಯಾಪುರ ಗ್ರಾಮದ ಅಂಜಿನಪ್ಪ(29) ಮತ್ತು ಮನೋಜ್ (19) ಸಾವನ್ನಪ್ಪಿದ ದುರ್ದೈವಿಗಳು ಎಂದು ತಿಳಿದು ಬಂದಿದೆ. ದಾವಣಗೆರೆಯಿಂದ ತ್ಯಾವಣಿಗೆ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎದುರಿನ ಬೈಕ್‌ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಬಂದ ಲಾರಿ ರಸ್ತೆ ಮೇಲೆ ಬಿದ್ದವರ ಮೇಲೆ ಹರಿದಿದೆ ಎನ್ನಲಾಗಿದೆ. ಪರಿಣಾಮ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಕೆಲ‌ಕಾಲ ಗಾಯಳು ರಸ್ತೆಯಲ್ಲೇ ನರಳಿದ್ದು, ಆಸ್ಪತ್ರೆಗೆ ಕರೆದೊಯ್ಯುಲು ವಾಹನ ಸಿಗದೆ ಪರದಾಟ ಅನುಭವಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿದ್ದು, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:ದಾವಣಗೆರೆ; ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬಳಿಕ ಹಿಂದಿನಿಂದ ಬಂದ ಲಾರಿ ಗಾಯಳುಗಳ ಮೇಲೆ ಹರಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ತ್ಯಾವಣಿಗೆ ಸಮೀಪದ ಕದ್ರನಹಳ್ಳಿ ಕ್ರಾಸ್ ಬಳಿ‌ ನಡೆದಿದೆ..

Body:ಮಿಯಾಪುರ ಗ್ರಾಮದ ಅಂಜಿನಪ್ಪ(29) ಮತ್ತು ಮನೋಜ್ (19) ಸಾವನ್ನಪ್ಪಿದ ದುರ್ಧೈವಿಗಳು ಎಂದು ತಿಳಿದು ಬಂದಿದೆ.. ದಾವಣಗೆರೆಯಿಂದ ತ್ಯಾವಣಿಗೆ ಕಡೆಗೆ ಬೈಕಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಎದುರಿನ ಬೈಕ್‌ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಬಂದ ಲಾರಿ ಗಾಯಳುಗಳ ಮೇಲೆ ಹರಿದಿದೆ ಎನ್ನಲಾಗಿದೆ. ಪರಿಣಾಮ ಸ್ಥಳದಲ್ಲೆ ಒಬ್ಬ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಕೆಲ‌ಕಾಲ ಗಾಯಳು ರಸ್ತೆಯಲ್ಲೇ ನರಳಿದ್ದು, ಆಸ್ಪತ್ರೆಗೆ ಕರೆದೊಯ್ಯುಲು ವಾಹನ ಸಿಗದೆ ಪರದಾಟ ಅನುಭವಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿದ್ದು, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ಲೊ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.