ETV Bharat / state

ಕೆರೆಯಲ್ಲಿ ಈಜಲು ಹೋಗಿ ಕುರಿಗಾಹಿ ಸಹೋದರರಿಬ್ಬರು ಸಾವು..

ಕುರಿ ಕಾಯುವ ವೇಳೆ ಸಹೋದರರಿಬ್ಬರು ಕೆರೆಯಲ್ಲಿ ಈಜಲು ತೆರಳಿ ಸಾವನ್ನಪ್ಪಿರುವ ಘಟನೆ ನಡೆದದೆ.

ಮೃತ ಸಹೋದರರು
ಮೃತ ಸಹೋದರರು
author img

By

Published : Apr 5, 2023, 1:13 PM IST

ದಾವಣಗೆರೆ: ಕೆರೆಯಲ್ಲಿ ಈಜಲು ಹೋಗಿ ಕುರಿಗಾಹಿಗಳಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಕೆರೆಯಲ್ಲಿ ನಡೆದಿದೆ. ವಿಜಯ್ (21) ಹಾಗೂ ರಾಜು (19) ಸಾವನ್ನಪ್ಪಿದ ಕುರಿಗಾಹಿಗಳು. ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ನಿವಾಸಿ ರಾಜು ಮೃತರು. ಕುರಿಗಳನ್ನು ಕಾಯುತ್ತಾ ಕೆರೆ ಬಳಿ ತೆರಳಿದ ಯುವಕರು ಈಜಲು ಮುಂದಾಗಿದ್ದಾರೆ. ಬಳಿಕ ಈಜುತ್ತ ಸ್ವಲ್ಪ ಮುಂದೆ ಸಾಗಿದ ನಂತರ ಕೆರೆಯ ಮಧ್ಯದಲ್ಲಿ ಇದ್ದ ಗುಂಡಿಗೆ ಇಬ್ಬರು ಸಿಲುಕಿಕೊಂಡಿದ್ದಾರೆ. ಈ ವೇಳೆ ಗುಂಡಿಯಲ್ಲಿ ಸಿಲುಕಿದ ಯುವಕರನ್ನು ಗಮನಿಸಿದ ಸ್ಥಳೀಯರು ರಕ್ಷಣೆಗೆ ತೆರಳಿದರೂ ಕೂಡ ಯಾವುದೇ ಪ್ರಯೋಜನ ಆಗದೇ ಯುವಕರು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ವಿಜಯ್-ರಾಜು ಸಂಬಂಧದಲ್ಲಿ ಸಹೋದರಿಯರ ಮಕ್ಕಳಾಗಿದ್ದಾರೆ. ಈ ಇಬ್ಬರನ್ನು ಕಳೆದುಕೊಂಡಿರುವ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದು ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ: ವೀಕೆಂಡ್​ ಎಂದು ಕೆರೆಗೆ ಈಜಲು ತೆರಳಿದ ವಿದ್ಯಾರ್ಥಿಗಳ ಸಾವು.. ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ವೀಕೆಂಡ್​ ಎಂದು ಕೆರೆಗೆ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಏ.1 ರಂದು ನಡೆದಿತ್ತು. ಬೆಂಗಳೂರಿನ ಖಾಸಗಿ ಕಾಲೇಜಿನ ಬಿ.ಫಾರ್ಮ್ ವಿದ್ಯಾರ್ಥಿಗಳಾದ ಸಾರಾಯಿಪಾಳ್ಯದ ರಾಧಿಕಾ (21), ಇಮ್ರಾನ್ (21), ಪೂಜಾ (21) ಎಂಬುವರು ಮೃತೊಟ್ಟಿದ್ದರು. ವೀಕೆಂಡ್ ಹಿನ್ನೆಲೆ ಮೂರು ಬೈಕ್​​ಗಳಲ್ಲಿ ಚಿಕ್ಕಬಳ್ಳಾಪುರದ ಜಲಾಶಯಕ್ಕೆ ಆಗಮಿಸಿದ್ದ 6 ಜನ ವಿದ್ಯಾರ್ಥಿಗಳು, ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಈಜು ಬಾರದೇ ಮೂವರು ವಿದ್ಯಾರ್ಥಿಗಳು‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಈಜಲು ಹೋಗಿ ಸ್ನೇಹಿತರ ಎದುರೇ ಪ್ರಾಣ ಬಿಟ್ಟ ಬಾಲಕ

ಇದೇ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಕಲ್ಲು ಕ್ವಾರಿಯಲ್ಲಿ ಸ್ನೇಹಿತರ ಜೊತೆ ಈಜಾಡಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿದ್ದ. ಬೆಂಗಳೂರು ರಾಜಾಜಿನಗರದ ಮನೋಜ್ ಎಂಬಾತ ಮೃತಪಟ್ಟಿದ್ದ. ನಾಲ್ವರು ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಇದ್ದಕ್ಕಿದಂತೆ ಮನೋಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮನೋಜ್​ನನ್ನು ಸ್ನೇಹಿತರು ಕಾಪಾಡಲು ಪ್ರಯತ್ನಿಸಿ ವಿಫಲರಾಗಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ 10 ಮಂದಿ ಬಾಲಕರು ಚಿಕ್ಕಬಳ್ಳಾಪುರಕ್ಕೆ ರೈಲಿನ ಮುಖಾಂತರ ಬಂದು ನಂತರ ಆಟೋದ ಮುಖಾಂತರ ಈಶಾ ಆದಿಯೋಗಿ ವೀಕ್ಷಿಸಿ ವಾಪಸ್ ಬರುವ ವೇಳೆ ಈಜಾಡಲು‌ ಹೋಗಿದ್ದರು. ಆಗ ಈ ದುರ್ಗಟನೆ ಸಂಭವಿಸಿದೆ.

ಕಲ್ಲು ಕ್ವಾರಿಯಲ್ಲಿ ಮುಳಗಿ ವಿದ್ಯಾರ್ಥಿ ಸಾವು

ಆನೇಕಲ್: ಕೆಲ ದಿನಗಳ ಹಿಂದೆ ಮಾದಪ್ಪನದೊಡ್ಡಿಯ ನೀರು ತುಂಬಿದ ಕಲ್ಲು ಕ್ವಾರಿಗೆ ಈಜಲು ತೆರಳಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ ಘಟನೆ ಜಿಗಣಿ ಬಳಿ ನಡೆದಿತ್ತು. ಆನೇಕಲ್ ಸಾಯಿರಾಮ್ ಕಾಲೇಜಿನಲ್ಲಿ ಮೊದಲನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್​ ಓದುತ್ತಿದ್ದ ಯದುಪ್ರಸಾದ್ ಘಟನೆಯಲ್ಲಿ ಮೃತಪಟ್ಟಿದ್ದ.

ಇದನ್ನೂ ಓದಿ: ವೀಕೆಂಡ್ ಹಿನ್ನೆಲೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ‌ ಮುಳುಗಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.