ETV Bharat / state

ಸೊಂಪಾಗಿ ಬೆಳೆದಿದ್ದ ಟೊಮ್ಯಾಟೊ ಬೆಳೆಗೆ 'ಕ್ರಿಮಿನಾಶಕ' ಸಿಂಪಡಿಸಿ ಕೈ ಸುಟ್ಟುಕೊಂಡ ರೈತರು! - congress kisssan unit president v shivaganaga

ಕೊಡಗನೂರು ಗ್ರಾಮದ ಶಿವಮೂರ್ತಿ ಹಾಗೂ ಮಂಜುನಾಥ್ ಎಂಬ ರೈತರು ಸೇರಿದಂತೆ ಹಲವರು ಟೊಮ್ಯಾಟೊ ಬೆಳೆ ಬೆಳೆದಿದ್ದರು. ಫಸಲು ಕೂಡ ಚೆನ್ನಾಗಿ ಬಂದಿತ್ತು. ಇನ್ನೂ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಖಾಸಗಿ ಕಂಪನಿಯ ವ್ಯಕ್ತಿಯೊಬ್ಬರ ಸಲಹೆಯಂತೆ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಿದ್ದು, ಉತ್ತಮ ಇಳುವರಿಯನ್ನು ಕಳೆದುಕೊಂಡಿದ್ದಾರೆ.

Tommato crop destroyed by sterilizer spray at Davanagere
ಟೊಮೇಟೊ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ಕೈ ಸುಟ್ಟುಕೊಂಡ ರೈತರು
author img

By

Published : Nov 5, 2020, 5:35 PM IST

ದಾವಣಗೆರೆ: ಉತ್ತಮ ಟೊಮ್ಯಾಟೊ ಇಳುವರಿಯ ನಡುವೆ ಇನ್ನೂ ಹೆಚ್ಚಾಗಿ ಬೆಳೆ ಬರಲಿ ಎಂಬ ಆಸೆಯಿಂದ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದ ರೈತರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕ್ರಿಮಿನಾಶಕ ಸಿಂಪಡಣೆ ಮಾಡಿದ ಮೇಲೆ ಗಿಡಗಳೆಲ್ಲಾ ಸುಟ್ಟು ಹೋಗಿ ಬೆಳೆ ನಾಶವಾಗಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ
ತಾಲೂಕಿನ ಕೊಡಗನೂರು ಗ್ರಾಮದ ಶಿವಮೂರ್ತಿ ಹಾಗೂ ಮಂಜುನಾಥ್ ಎಂಬ ರೈತರು ಸೇರಿದಂತೆ ಹಲವರು ಟೊಮ್ಯಾಟೊ ಬೆಳೆ ಬೆಳೆದಿದ್ದರು. ಫಸಲು ಕೂಡ ಚೆನ್ನಾಗಿ ಬಂದಿತ್ತು. ಇನ್ನೂ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದರು.‌ ಅಷ್ಟರಲ್ಲೇ ಕ್ರಿಮಿನಾಶಕ ಔಷಧಿಯ ಖಾಸಗಿ ಕಂಪನಿಯ ವ್ಯಕ್ತಿಯೊಬ್ಬ ಉತ್ತಮ ಇಳುವರಿ ಹಾಗೂ ರೋಗ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದಾರೆ. ಅದರಂತೆ ರೈತರು ಔಷಧ ಸಿಂಪಡಿಸಿರುವ ಪರಿಣಾಮ ಟೊಮ್ಯಾಟೊ ಬೆಳೆ ಪೂರ್ತಿ ನಾಶವಾಗಿದೆ. ಗಿಡಗಳು ಸುಟ್ಟು ಹೋಗಿವೆ. ಹಾನಿಗೊಂಡ ರೈತರ ಜಮೀನಿಗೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಭೇಟಿ ನೀಡಿ ಪರಿಶೀಲಿಸಿದ್ದು, ರೈತರಿಗೆ ಖಾಸಗಿ ಕಂಪನಿಗಳು ನೀಡಿದ ಕ್ರಿಮಿನಾಶಕ ಔಷಧ ವಿರುದ್ಧ ಕಿಡಿಕಾರಿದರು. ರೈತರಿಗೆ ಆಗುತ್ತಿರುವ ಮೋಸಕ್ಕೆ ಕ್ರಿಮಿನಾಶಕವೇ ಕಾರಣ. ಇಂತಹ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಟೊಮ್ಯಾಟೊ ಬೆಳೆ ಹಾನಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ಕ್ರಿಮಿನಾಶಕ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಇಂತಹ ಔಷಧ ಕಂಪನಿಗಳನ್ನ ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ‌ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.