ETV Bharat / state

ಗಾಂಜಾ‌‌‌ ಮಾರಾಟಕ್ಕೆ ಯತ್ನ: ಶಿವಮೊಗ್ಗ ಮೂಲದ ಮೂವರ ಬಂಧನ - 3 marijuana sale accused arrest news

ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಹನಗವಾಡಿ ಗ್ರಾಮದ ಹೋಟೆಲ್​ ಬಳಿ ಗಾಂಜಾ‌ ಮಾರರಲು ಬಂದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Marijuana
Marijuana
author img

By

Published : Sep 13, 2020, 1:58 PM IST

ದಾವಣಗೆರೆ: ಗಾಂಜಾ ಮಾರಾಟ ಮಾಡಲು ಬಂದಿದ್ದ ಶಿವಮೊಗ್ಗ ಮೂಲದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಮಲ್ಲಿಕಾರ್ಜುನ್, ಭದ್ರಾವತಿ ಜನ್ನಾಪುರದ ರಾಹುಲ್, ಪೇಪರ್ ಟೌನ್ ನ ಪ್ರಮೋದ್ ಬಂಧಿತರು. ಹರಿಹರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಹನಗವಾಡಿ ಗ್ರಾಮದ ಹೋಟೆಲ್ ಬಳಿ ಆರೋಪಿಗಳು ಗಾಂಜಾ‌ ಮಾರಲು ಬಂದಿದ್ದ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.

ಗ್ರಾಮಾಂತರ ಠಾಣೆ ಡಿವೈಎಸ್ ಪಿ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಿಪಿಐ ಶಿವಪ್ರಸಾದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಗಳಿಂದ 1.25 ಲಕ್ಷ ರೂ.‌ಮೌಲ್ಯದ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.