ETV Bharat / state

ಕೆ.ಎಸ್.ಈಶ್ವರಪ್ಪಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ: ತಿಪ್ಪಣ್ಣ - ದಾವಣಗೆರೆಯಲ್ಲಿ ಮಾನವ ಹಕ್ಕುಗಳ ಸಮಿತಿ ಪತ್ರಿಕಾಗೋಷ್ಠಿ

ಬಿಜೆಪಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಮಾನಸಿಕ ಚಿಕಿತ್ಸೆಯ ಅವಶ್ಯಕತೆ ಇದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ತಿಪ್ಪಣ್ಣ ಹೇಳಿದರು.

Thippanna agitated against Minister KS Eshwarappa
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ತಿಪ್ಪಣ್ಣ
author img

By

Published : Dec 4, 2019, 9:00 PM IST

ದಾವಣಗೆರೆ: ಬಿಜೆಪಿ ಸಚಿವ ಕೆ.ಎಸ್​.ಈಶ್ವರಪ್ಪ ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ತಿಪ್ಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ತಿಪ್ಪಣ್ಣ

ಮುಸ್ಲಿಮರು ಕನಿಷ್ಟ 10 ವರ್ಷ ಪಕ್ಷದ ಕಚೇರಿಯಲ್ಲಿ ಕಸಗುಡಿಸಿದರೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದಿದ್ದ ಕೆ.ಎಸ್.ಈಶ್ವರಪ್ಪನವರು, ಈಗ ಸಿಎಂ ಕಾರ್ಯದರ್ಶಿಯವರು ಶಿವಾಜಿ ನಗರದಲ್ಲಿ ಬಿಜೆಪಿ ಬೆಂಬಲಿಸಿದರೆ ರೋಷನ್ ಬೇಗ್ ಅವರನ್ನು ಎಂಎಲ್​ಸಿ ಮಾಡುತ್ತೇವೆ, ಸಚಿವ ಸ್ಥಾನ‌ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದರು.

ಬಿಜೆಪಿಯ ಅವಕಾಶವಾದಿ ರಾಜಕೀಯಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

Intro:ದಾವಣಗೆರೆ: ಈ ಹಿಂದೆ ಸಚಿವ ಕೆಎಸ್ ಈಶ್ವರಪ್ಪ, ಮುಸ್ಲಿಂರು ಕನಿಷ್ಟ ಪಕ್ಷ 10 ವರ್ಷ ಕಾಲ ಪಕ್ಷದ ಕಚೇರಿಯಲ್ಲಿ ಕಸಗೂಡಿಸಿದರೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದಿದ್ದರು, ಆದರೆ ಈಗ ಸಿಎಂ ಕಾರ್ಯದರ್ಶಿಯವರು ಶಿವಾಜಿ ನಗರದಲ್ಲಿ ಬಿಜೆಪಿ ಬೆಂಬಲಿಸಿದರೆ ರೋಷನ್ ಬೇಗ್ ಅವರನ್ನು ಎಂಎಲ್ ಸಿ ಮಾಡಿ ಸಚಿವ ಸ್ಥಾನ‌ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ..

Body:ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ತಿಪ್ಪಣ್ಣ, ಮುಸ್ಲಿಂರು ಟಿಕೆಟ್ ಪಡೆಯುವುದಾದರೆ, ಕನಿಷ್ಟ ಹತ್ತು ವರ್ಷ ಕಸಗೂಡಿಸಬೇಕು ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು, ಆದರೆ ಇತ್ತ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು, ರೋಷನ್ ಬೇಗ್ ಅವರ ಮನೆಗೆ ತೆರಳಿ, ಮುಸ್ಲಿಂ ಸಮುದಾಯದ ಮತಗಳನ್ನು ಬಿಜೆಪಿ ಅಭ್ಯರ್ಥಿಗೆ ಹಾಕಿದರೆ ಮುಂದೆ ರೋಷನ್ ಬೇಗ್ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿಕೆ‌ ನೀಡಿದ್ದಾರೆ. ಇದು ಬಿಜೆಪಿಯ ಗೋಸುಂಬೆ ಬಣ್ಣದ ಆಟವಾಗಿದೆ, ಈ ಮೂಲಕ ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು..

ಒಂದು ರೀತಿಯಲ್ಲಿ‌ ಮಾನಸಿಕ‌ ಅಸ್ವಸ್ಥರಂತೆ ಈಶ್ವರಪ್ಪ‌ ಮಾತನಾಡುತ್ತಾರೆ, ಮೆದುಳಿಗೂ ನಾಲಿಗೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಧರ್ಮ ವಿರೋಧಿ, ಜಾತಿ ವಿರೋಧಿ ಹೇಳಿಕೆ ನೀಡುತ್ತಾರೆ. ಆದ್ದರಿಂದ ಈ‌ ಕೂಡಲೇ ಮಾನಸಿಕ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು..

ಪ್ಲೊ..

ಬೈಟ್; ಹೆಚ್ ತಿಪ್ಪಣ್ಣ. ಪ್ರಧಾನ ಕಾರ್ಯದರ್ಶಿ..
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ..

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.