ETV Bharat / state

ದಾವಣಗೆರೆ: ಗಂಧದ ಮರ ಕದಿಯಲು ಅಡ್ಡಿಯಾದ ನಾಯಿಗಳಿಗೆ ವಿಷ ಹಾಕಿದ ಖದೀಮರು.. ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು - ದಾವಣಗೆರೆಯಲ್ಲಿ ಗಂಧದ ಮರ ಖದೀಮರು

ಮನೆ ಮುಂದಿನ ಗಂಧದ ಮರ ಕದಿಯಲು ಬಂದ ಖದೀಮರನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗಂಧದ ಮರ
ಗಂಧದ ಮರ
author img

By

Published : Nov 1, 2022, 8:55 PM IST

ದಾವಣಗೆರೆ: ಗಂಧದ ಮರ ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ಮರ. ಅಂತೆಯೇ ಗಂಧದ ಮರವನ್ನು ಇದೀಗ ಪ್ರತಿ ಗ್ರಾಮಗಳಲ್ಲಿ ಜನ ತಮ್ಮ ಮನೆಗಳ ಮುಂದೆ ಬೆಳೆಯಲಾರಂಭಿಸಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಗ್ರಾಮದಲ್ಲಿ ನಾಯಿಗಳಿಗೆ ವಿಷ ಹಾಕಿ ಮರ ಕದಿಯಲು ಬಂದು ಜನರ ಕೈಗೆ ಸಿಕ್ಕು ಧರ್ಮದೇಟು ತಿಂದಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆಯ ಗ್ರಾಮಸ್ಥರು ಕಳ್ಳರನು ಹಿಡಿದು ಸಾಹಸ ಮೆರೆದಿದ್ದಾರೆ. ತಮ್ಮ ಮನೆ ಮುಂದೆ ಗಂಧದ ಮರಗಳನ್ನು ಬೆಳೆಸಿ ಪೋಷಣೆ ಮಾಡ್ತಿದ್ದ ಮರಗಳಿಗೆ ಕೊಡಲಿ ಹಾಕಿದ ಖದೀಮರ ಹೆಡೆಮುರಿಕಟ್ಟಿದ್ದಾರೆ. ಐದಾರು ಜನ ಕಳ್ಳರು ಮಂಗಳವಾರ ರಾತ್ರಿ ಮೂರು ಗಂಟೆಗೆ ಗ್ರಾಮಕ್ಕೆ ನುಗ್ಗಿದ್ದರು.

ಜನರು ಮನೆಯಿಂದ ಹೊರಬರಬಾರದು ಎಂದು ಮನೆಯ ಹೊರಗಿನಿಂದ ಚಿಲಿಕ ಹಾಕಿದ ಖದೀಮರು, ತಮ್ಮ ಕೆಲಸ ಶುರು ಮಾಡಿದ್ದರು. ಆದರೆ ಅವರ ಕೆಲಸಕ್ಕೆ ಅಡ್ಡಿಯಾದ ಎರಡು ಕಾವಲು ನಾಯಿಗಳಿಗೆ ಕೋಳಿ ಮಾಂಸದಲ್ಲಿ ವಿಷ ವಿಕ್ಕಿ ಸಾಯಿಸಿದ್ದಾರೆ.

ಗಂಧದ ಮರ ಕದಿಯಲು ಅಡ್ಡಿಯಾದ ನಾಯಿಗಳಿಗೆ ವಿಷ ಹಾಕಿದ ಖದೀಮರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ಬಳಿಕ ಮತ್ತೇ ಕಟಿಂಗ್ ಮಿಷನ್​ನಿಂದ ಚಂದ್ರು ಗೌಡ ಎಂಬುವರಿಗೆ ಸೇರಿದ ಬೃಹತ್ ಶ್ರೀಗಂಧದ ಮರವನ್ನು ಸದ್ದಿಲ್ಲದೇ ಕೊಯ್ಯಲು ಆರಂಭಿಸಿದ್ದರು. ಈ ವೇಳೆ ಶಬ್ದ ಕೇಳಿ ಬಂದ ತಕ್ಷಣ ಮನೆಯವರು ಹೊರಬರಲು ಯತ್ನಿಸಿದಾಗ ಹೊರಗಿನಿಂದ ಬಾಗಿಲು ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣವೇ ಕೂಗಾಡಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಆಗ ಖದೀಮರು ಮರ ಬಿಟ್ಟು ಹತ್ತಿರದ ಹೊಲಗಳಿಗೆ ಓಡಿ ಹೋಗಿ ಅಲ್ಲೇ ಅಡಗಿಕೊಂಡಿದ್ದರು. ಬೆಳಿಗ್ಗೆವರೆಗೆ ಗ್ರಾಮಸ್ಥರು ಕಳ್ಳರನ್ನು ಹುಡಿಕಿ ಆರು ಜನರ ಪೈಕಿ ಇಬ್ಬರನ್ನು ಹಿಡಿದು ಕಟ್ಟಿ ಹಾಕಿದರು. ಉಳಿದ ನಾಲ್ವರು ಪರಾರಿಯಾಗಿದ್ದಾರೆ.

ಶ್ರೀಗಂಧದ ಮರವನ್ನು ಕದಿಯಲು ಬಂದಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಕಟ್ಟುಹಾಕಿ ಮನ ಬಂದಂತೆ ಥಳಿಸಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಕಳ್ಳರು ಹಾಕಿದ ವಿಷ ತಿಂದು ಶ್ವಾನಗಳು ನರಳಿ ನರಳಿ ಕೊನೆಯುಸಿರೆಳೆದ್ದರಿಂದ ಗ್ರಾಮಸ್ಥರು ಕಂಬನಿ ಮಿಡಿದರು.

(ಓದಿ: ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಕಳ್ಳತನವಾದ ಕೇವಲ 6 ತಾಸಿನಲ್ಲಿ ಆರೋಪಿ ಅರೆಸ್ಟ್ )

ETV Bharat Logo

Copyright © 2025 Ushodaya Enterprises Pvt. Ltd., All Rights Reserved.