ದಾವಣಗೆರೆ : ಪಾಠ ಮಾಡಲು ತರಗತಿಗೆ ಬಂದು ಕುಳಿತಿದ್ದ ಹಿಂದಿ ಹಿರಿಯ ಶಿಕ್ಷಕರ ತಲೆ ಮೇಲೆ ಬಕೆಟ್ ಹಾಕಿ ಅವಮಾನ ಮಾಡಿದ್ದ ಪುಂಡ ವಿದ್ಯಾರ್ಥಿಗಳು ಇದೀಗ ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಕಳೆದ ಡಿ.3ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಂದಿನಂತೆ ಹಿಂದಿ ಶಿಕ್ಷಕರಾದ ಪ್ರಕಾಶ್ ಬೋಗಾರೆ ಅವರು 10ನೇ ತರಗತಿಗೆ ಪಾಠ ಮಾಡಲು ಕೊಠಡಿಗೆ ತೆರಳಿದ್ದರು.
ಆ ಸಂದರ್ಭದಲ್ಲಿ ತರಗತಿಯ ಡಸ್ಟ್ ಬಿನ್‌ನಲ್ಲಿನ ಕಸ ಹೊರಗಡೆ ಹಾಕಲು ತಿಳಿಸಿದ್ದಾರೆ. ಶಿಕ್ಷಕ ಪ್ರಕಾಶ್ ಅವರು ಹೇಳಿದ ಹಾಗೆ ವಿದ್ಯಾರ್ಥಿಗಳು ಕಸ ಹಾಕಿ ಬಂದು ಪಾಠ ಮಾಡುತ್ತಿದ್ದ ಶಿಕ್ಷಕರ ಮೇಲೆ ಕಸದ ಡಬ್ಬಿ ಹಾಕಿ ಕಿಚಾಯಿಸಿದ್ದರಲ್ಲದೇ, ತಲೆಗೆ ಹೊಡೆದಿದ್ದರು.
ಓದಿ:ದಾವಣಗೆರೆ: ಶಿಕ್ಷಕನ ತಲೆಗೆ ಬಕೆಟ್ ತೊಡಿಸಿ ವಿಕೃತ ಮನಸ್ಸಿನ ವಿದ್ಯಾರ್ಥಿಗಳ ಪುಂಡಾಟ
ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದೀಗ ವಿದ್ಯಾರ್ಥಿಗಳಿಗೆ ಮಾಡಿದ ತಪ್ಪಿನ ಅರಿವಾಗಿದ್ದು, ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಓದಿ: ಶಿಕ್ಷಕರ ತಲೆ ಮೇಲೆ ಬಕೆಟ್ ಹಾಕಿ ಪುಂಡಾಟ: ವಿಕೃತಿ ಮೆರೆದ ವಿದ್ಯಾರ್ಥಿಗಳ ಸ್ಥಿತಿ ಹೇಗಿದೆ ಗೊತ್ತಾ..?