ETV Bharat / state

ಮೀಸಲಾತಿ ಹೆಚ್ಚಳ ಸಮಾಜಕ್ಕೆ ಸಿಗಬೇಕಾದ ಆಸ್ತಿಯಾಗಿದೆ: ಸತೀಶ್ ಜಾರಕಿಹೊಳಿ - ವಾಲ್ಮೀಕಿ ಜಾತ್ರೆ

ಮೀಸಲಾತಿ ಹೆಚ್ಚಳ ಸಮಾಜಕ್ಕೆ ಸಿಗಬೇಕಾದ ಆಸ್ತಿಯಾಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಮಾತಿಲ್ಲ. ಕಳೆದ ಬಾರಿ ನಮಗೆ ಮೀಸಲಾತಿ ಹೆಚ್ಚಿಸದ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದೀರಿ. ಈಗಲಾದರು ನ್ಯಾಯಸಮ್ಮತವಾಗಿ ಈ ಸರ್ಕಾರ ನಮಗೆ ಮೀಸಲಾತಿ ನೀಡಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ರು.

Satish Zarakiholi
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್​​ ಜಾರಕಿಹೊಳಿ ವಾಗ್ದಾಳಿ
author img

By

Published : Feb 9, 2021, 6:10 PM IST

ದಾವಣಗೆರೆ: ಕುಂಬಳಕಾಯಿ ಕೂಡ ಶ್ರೀರಾಮುಲು ಅವರ ಕೈಯಲ್ಲಿದೆ. ಕುಡುಗೋಲು ಸಹ ಅವರ ಬಳಿ ಇದೆ ಎಂದು ಮೀಸಲಾತಿ ವಿಚಾರವಾಗಿ ಸಚಿವ ಶ್ರೀರಾಮುಲುಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರು ಪಕ್ಷ ಹಾಗೂ ಸಿಎಂ ಮೇಲೆ ಒತ್ತಡ ಹಾಕಲಿ. ಸಿಎಂ ಮನವೊಲಿಸಿ ಮೀಸಲಾತಿ ಹೆಚ್ಚಿಸಲಿ. ನಾವು ಸಚಿವ ಶ್ರೀರಾಮುಲುಗೆ‌ ಸಾಥ್ ಕೊಡುತ್ತೇವೆ. ಮೀಸಲಾತಿ ಹೆಚ್ಚಳ ಸಮಾಜಕ್ಕೆ ಸಿಗಬೇಕಾದ ಆಸ್ತಿಯಾಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಮಾತಿಲ್ಲ. ಕಳೆದ ಬಾರಿ ನಮಗೆ ಮೀಸಲಾತಿ ಹೆಚ್ಚಿಸದ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದೀರಿ. ಈಗಲಾದರು ನ್ಯಾಯಸಮ್ಮತವಾಗಿ ಈ ಸರ್ಕಾರ ನಮಗೆ ಮೀಸಲಾತಿ ನೀಡಬೇಕಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಿಸ್ತೀವಿ ಅಂತ ಶಾಸಕ ರಾಜುಗೌಡ ಲಿಂಗಸೂರಲ್ಲಿ ಹೇಳಿದ್ರು ಎಂದರು.

ಓದಿ: ಸಿಎಂ ಯಡಿಯೂರಪ್ಪ ಅವರ ಬೆನ್ನೇರಿದ ಮೀಸಲು ಹೋರಾಟಗಳು...!

ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ. ಸರ್ಕಾರದಲ್ಲಿ ಇಬ್ಬರು ಪ್ರಭಾವಿ ಮಂತ್ರಿಗಳಿದ್ದಾರೆ. ಸಿಎಂ ಮೇಲೆ ಒತ್ತಡ ಹೇರುವ ಶಕ್ತಿ ಅವರಿಗಿದೆ. ಈಗಾಗಲೇ ಅವರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅದು ಸಮಾಜದ ಮೇಲೆ ಪ್ರಭಾವ ಬೀರಬೇಕಿದೆ. ಸಾಂಘಿಕವಾಗಿ ಹೋರಾಟ ಮಾಡಿ ಮೀಸಲಾತಿ ಪಡೆಯಬೇಕು. ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ನಾವು ಯಾವುದೇ ಪಕ್ಷಗಳಲ್ಲಿದ್ದರು, ಸಮಾಜ ಅಂತ ಬಂದಾಗ ನಾವೆಲ್ಲಾ ಒಂದೇ ಎಂದರು.

ಮೂವತ್ತು ವರ್ಷಗಳಿಂದ ನಡೆಯುತ್ತಿರುವ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ. ನಾವು ಯಾರ ಹಕ್ಕನ್ನು ಕಿತ್ಕೊಳುತ್ತಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತಿದ್ದೇವೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್​​ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.