ದಾವಣಗೆರೆ : ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ 108 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 20,089 ಜನರು ಡಿಸ್ಚಾರ್ಜ್ ಆಗಿದ್ದಾರೆ.
39 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20893ಕ್ಕೆ ಏರಿಕೆಯಾಗಿದೆ. ದಾವಣಗೆರೆ 16, ಹರಿಹರ 9, ಜಗಳೂರು 3, ಚನ್ನಗಿರಿ 6 ಹಾಗೂ ಹೊನ್ನಾಳಿಯ ಐವರಲ್ಲಿ ಸೋಂಕು ಕಂಡು ಬಂದಿದೆ.
ದಾವಣಗೆರೆ ತಾಲೂಕಿನ ಹೆಚ್.ಕಲ್ಪನಹಳ್ಳಿ ಗ್ರಾಮದ 80 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 258 ಜನರು ಸಾವನ್ನಪ್ಪಿದ್ದಾರೆ. 679 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇನ್ನು 7796 ಸ್ವ್ಯಾಬ್‌ಗಳ ರಿಪೋರ್ಟ್ ಬರಬೇಕಿದೆ.