ETV Bharat / state

ದಿವ್ಯಾಂಗನ ಮನೆಗೆ ತೆರಳಿ ಪಿಂಚಣಿ ಪತ್ರ ವಿತರಿಸಿದ ಜಿಲ್ಲಾಧಿಕಾರಿ

ಮಾಸಾಶನ ಬಾರದೇ ನಾಲ್ಕು ವರ್ಷ ಕಳೆದಿರುವುದಾಗಿ ಜಿಲ್ಲಾಧಿಕಾರಿ ಶಿವಾನಂದ ಕೃಪಾಶಿ ಅಳಲು ತೋಡಿಕೊಂಡಿದ್ದ ದಿವ್ಯಾಂಗನ ಮನೆಗೆ ತೆರಳಿ ಪಿಂಚಣಿ ಆದೇಶ ಪತ್ರ ವಿತರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

author img

By

Published : Aug 18, 2022, 10:24 AM IST

the-dc-distributed-the-pension-letter-to-disabled-person
ದಿವ್ಯಾಂಗನ ಮನೆಗೆ ತೆರಳಿ ಪಿಂಚಣಿ ಪತ್ರ ವಿತರಿಸಿದ ಜಿಲ್ಲಾಧಿಕಾರಿ

ದಾವಣಗೆರೆ : ಕೈಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿರುವ ದಿವ್ಯಾಂಗನನ್ನು ಗುರುತಿಸಿ ನೂತನ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಪಿಂಚಣಿ ಪತ್ರ ವಿತರಿಸಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಪಂಚಾಯಿತಿ ವ್ಯಾಪ್ತಿಯ ಜ್ಯೋತಿಪುರ ಗ್ರಾಮದ ನಿವಾಸಿ ಸತೀಶ್ ನಾಯ್ಕ್ (30) ಎಂಬವರ ಮನೆಗೆ ತೆರಳಿ ಮಾಸಾಶನ ಆದೇಶ ಪತ್ರ ವಿತರಿಸಿದರು. ಜೊತೆಗೆ ಸಂತ್ರಸ್ತ ಅಂಗವಿಕಲ ಪೋಷಣಾ ವೇತನದ ಮಂಜೂರಾತಿ ಆದೇಶ ಪತ್ರ ಹಾಗೂ ಆಧಾರ್ ಕಾರ್ಡ್ ಅನ್ನು ವಿತರಿಸಿದರು.

ಈ ಬಗ್ಗೆ ದಿವ್ಯಾಂಗ ಸತೀಶ್ ನಾಯ್ಕ್ ಅವರ ಕುಟುಂಬ, ನಾವು ತುಂಬಾ ಕಷ್ಟದಲ್ಲಿದ್ದೇವೆ. 4 ವರ್ಷಗಳಿಂದ ಸತೀಶ್‌ಗೆ ಅಂಗವಿಕಲ ಮಾಸಾಶನ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿಯವರಿಗೆ ತಿಳಿಸಿದ್ದರು.‌ ಈ ಬಗ್ಗೆ ಕ್ರಮಕೈಗೊಂಡ ಜಿಲ್ಲಾಧಿಕಾರಿ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲಂಚ ಮಂಚದ ಸರ್ಕಾರ.. ಪ್ರಿಯಾಂಕ್‌ ಖರ್ಗೆ ವಿರುದ್ಧದ ಹೇಳಿಕೆಗೆ ಕ್ಷಮೆ ಯಾಚಿಸಿದ ತೇಲ್ಕೂರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.