ETV Bharat / state

ಪಾಕಿಸ್ತಾನದಲ್ಲಿ ದೇವಸ್ಥಾನ ಉರುಳಿಸಿರುವುದು ಖಂಡನೀಯ : ಎಂ ಪಿ ರೇಣುಕಾಚಾರ್ಯ - MP Renukacharya

ಮಂಗಳೂರಿನ ಉಜಿರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವ ಎಸ್‌ಡಿಪಿಐ ಕಾರ್ಯಕರ್ತರ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ನಾಯಕರುಗಳು ಖಂಡಿಸದೆ, ತಮ್ಮ ವೋಟ್ ಬ್ಯಾಂಕ್​ನ ಭದ್ರಪಡಿಸಿಕೊಳ್ಳುವ ದೃಷ್ಟಿಯಲ್ಲಿ ಅವರನ್ನು ಓಲೈಸುವ ಕೆಲಸವನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ..

MP Renukacharya
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ
author img

By

Published : Jan 4, 2021, 12:17 PM IST

ದಾವಣಗೆರೆ : ಪಾಕಿಸ್ತಾನದಲ್ಲಿ ಇತ್ತೀಚಿಗೆ ದೇವಾಲಯವೊಂದನ್ನು ಉರುಳಿಸಿರುವುದು ಖಂಡನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ತಮ್ಮ ಮತ ಕ್ಷೇತ್ರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳು ದೇವಾಲಯ ನಿರ್ಮಾಣ ಮಾಡಿ ಪೂಜೆ ನೆರವೇರಿಸುತ್ತಿದ್ದರು.

ಆದರೆ, ಅಲ್ಲಿನ ಕೆಲ ಬಹುಸಂಖ್ಯಾತರು ಅದನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ತಾನ ತನ್ನ ಸಣ್ಣತನದ ಬುದ್ಧಿ ತೋರುತ್ತಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಇದನ್ನು ಒಕ್ಕೊರಲಿನಿಂದ ಎಲ್ಲರೂ ಖಂಡಿಸಬೇಕಾಗಿದೆ ಎಂದರು.

ಓದಿ: ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು : ಯತ್ನಾಳ್​ಗೆ ರೇಣುಕಾಚಾರ್ಯ ಟಾಂಗ್​

ಮಂಗಳೂರಿನ ಉಜಿರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವ ಎಸ್‌ಡಿಪಿಐ ಕಾರ್ಯಕರ್ತರ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ನಾಯಕರುಗಳು ಖಂಡಿಸದೆ, ತಮ್ಮ ವೋಟ್ ಬ್ಯಾಂಕ್​ನ ಭದ್ರಪಡಿಸಿಕೊಳ್ಳುವ ದೃಷ್ಟಿಯಲ್ಲಿ ಅವರನ್ನು ಓಲೈಸುವ ಕೆಲಸವನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಇನ್ನು, ದೇವಾಲಯವನ್ನು ಕೆಡವಿರುವುದಕ್ಕೆ ಪಾಕಿಸ್ತಾನ ಕ್ಷಮೆ ಯಾಚಿಸಬೇಕು. ಅಲ್ಲದೇ ಬೀಳಿಸಿರುವ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕೆಂದು ಅವರು ಒತ್ತಾಯಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.