ದಾವಣಗೆರೆ : ಗೋಮಾಳ ಜಮೀನಿನಲ್ಲಿ ಬಿತ್ತನೆ ಕೈಗೊಂಡ ಸಂಬಂಧ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ವಾಗ್ವಾದ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗಿ ಗ್ರಾಮದಲ್ಲಿ ನಡೆದಿದೆ. ಆಳದಮ್ಮ ಎಂಬ ರೈತಾಪಿ ಕುಟುಂಬ ಎರಡುವರೆ ಎಕರೆ ಗೋಮಾಳ ಜಮೀನಿನಲ್ಲಿ 25 ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿತ್ತು.
ಜಮೀನಿನಲ್ಲಿ ಇತ್ತೀಚಿಗಷ್ಟೇ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಈ ನಡುವೆ ಏಕಾಏಕಿ ಜೆಸಿಬಿ ಜೊತೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬಿತ್ತನೆ ಮಾಡಲಾಗಿದ್ದ ಗೋಮಾಳ ಜಮೀನಿನಲ್ಲಿ ಗುಂಡಿ ತೆಗೆದು ಗಿಡಗಳನ್ನು ಹಾಕಲು ಮುಂದಾಗಿದ್ದಾರೆ. ಈ ವೇಳೆ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.
ಕಳೆದ ಕೆಲ ವರ್ಷಗಳ ಹಿಂದೆ 90 ಎಕರೆ ಗೋಮಾಳ ಜಾಗವನ್ನು ರೈತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇನ್ನು, ಗಿಡಗಳನ್ನು ನೆಡಲು ತೆಗೆದಿದ್ದ ಹೊಂಡಗಳ ಒಳಗೆ ಕುಳಿತು ರೈತ ಮಹಿಳೆಯರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಓದಿ: ದಾವಣಗೆರೆಯಲ್ಲಿ ಪತ್ತೆಯಾಯ್ತು ಕೊರೊನಾ ರೂಪಾಂತರಿ ಎ-ನೆಕ್ ಖಾಯಿಲೆ: ಹೀಗಂತಾರೆ ವೈದ್ಯರು..