ETV Bharat / state

ಮೂಢನಂಬಿಕೆ ಕುಷ್ಠರೋಗ ನಿವಾರಣೆಗೆ ತೊಡಕಾಗಿದೆ : ಡಾ.ಎ.ಮುರುಳೀಧರ

author img

By

Published : Jan 31, 2020, 10:56 PM IST

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಟಿಹೆಚ್‌ಒ ಮುಂಭಾಗ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹರಿಹರ
harihara

ಹರಿಹರ : ನಿರಂತರ ಚಿಕಿತ್ಸೆ ಪಡೆಯದಿರುವುದು ಹಾಗೂ ಮೂಢನಂಬಿಕೆಯ ಮನೋಭಾವ ಕುಷ್ಠರೋಗ ನಿವಾರಣೆಗೆ ತೊಡಕಾಗಿ ಪರಿಣಮಿಸಿದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಎ.ಮುರುಳೀಧರ್​ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಟಿಹೆಚ್‌ಒ ಮುಂಭಾಗ ಆಯೋಜಿಸಿದ್ದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸಲು ಗುರಿ ಹೊಂದಲಾಗಿದೆ. ಮೊದಲು ಕಾಯಿಲೆ ಪೀಡಿತರಲ್ಲಿರುವ ಉದಾಸೀನತೆ ಹಾಗೂ ಮೌಢ್ಯತೆ ದೂರಗೊಳಿಸಬೇಕಿದೆ ಎಂದರು.

ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಕುಷ್ಠರೋಗದ ವಿರುದ್ಧ ಕೊನೆಯ ಯುದ್ಧ ಎಂಬ ಘೋಷ ವಾಕ್ಯದೊಂದಿಗೆ ಇಂದಿನಿಂದ ಫೆ.13ರವರೆಗೆ ರೋಗದ ಬಗ್ಗೆ ಅರಿವು ಆಂದೋಲನ ಆಯೋಜಿಸಲಾಗಿದೆ. ಗಾಂಧೀಜಿಯವರ ಕುಷ್ಠ ಮುಕ್ತ ದೇಶದ ಕನಸನ್ನು ನನಸು ಮಾಡಬೇಕಿದೆ. ಆಂದೋಲನದಲ್ಲಿ ಇಲಾಖೆಯ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಬಳಿಕ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಇತರೆ ಕಾಯಿಲೆಗಳಂತೆಯೇ ಕುಷ್ಠರೋಗವೂ ವೈರಸ್ ಮೂಲಕ ಹರಡುವ ಒಂದು ಕಾಯಿಲೆಯಾಗಿದೆ. ಇದನ್ನು ಸಂಪೂರ್ಣ ನಿವಾರಣೆ ಮಾಡಬಹುದಾಗಿದೆ. ಆದರೆ ರೋಗಿ ನಿಯಮಿತವಾಗಿ ಪೂರ್ಣ ಚಿಕಿತ್ಸೆಯನ್ನು ಪಡೆಯಬೇಕು. ಈ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಇಒ ಯು.ಬಸವರಾಜಪ್ಪ, ಟಿಎಚ್‌ಒ ಡಾ.ಚಂದ್ರಮೋಹನ್, ವೈದ್ಯಾಧಿಕಾರಿ ನಟರಾಜ, ಡಾ.ರೇಣುಕಾರಾಧ್ಯ, ಸಿಡಿಪಿಒ ಜಫ್ರುನ್ನಿಸಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಕಚೇರಿ ಸಿಬ್ಬಂದಿ ರವಿಶಂಕರ, ಆಂಜನೇಯ, ಸಂದೀಪ್, ಡಾ.ಶಶಿಕಲಾ, ಡಾ.ಲಕ್ಷ್ಮಿ, ಡಾ.ಖಾದರ್, ಡಾ.ಪ್ರಶಾಂತ್, ಆರೋಗ್ಯ ಶಿಕ್ಷಣಾಧಿಕಾರಿ ಯಶೋದಮ್ಮ, ಹಿರಿಯ, ಕಿರಿಯ ಆರೋಗ್ಯಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.