ETV Bharat / state

ಅರಣ್ಯ ಕೃಷಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಾದರಿ ರೈತನ ಯಶೋಗಾಥೆ - ದಾವಣಗೆರೆಯ ಹರಿಹರದಲ್ಲಿ ಮಾದರಿ ಕೃಷಿ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣಪುರ ಗ್ರಾಮದ ವೆಂಕಟರಾಮಾಂಜನೇಯ ಅವರ ತಂದೆ ಸುಬ್ಬರಾಯರ ಕನಸನ್ನು ನನಸು ಮಾಡಿದ್ದಾರೆ. ತಮ್ಮ ಹತ್ತು ಎಕರೆ ತೋಟದಲ್ಲಿ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.

ಮಾದರಿ ರೈತ ವೆಂಕಟರಾಮಾಂಜನೇಯ
ಮಾದರಿ ರೈತ ವೆಂಕಟರಾಮಾಂಜನೇಯ
author img

By

Published : Jul 28, 2022, 10:04 PM IST

ದಾವಣಗೆರೆ: ಅವರು ಓದಿದ್ದು ಹತ್ತನೆ ತರಗತಿ. ಆದರೆ, ಅರಣ್ಯ ಕೃಷಿಯಲ್ಲಿ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆಯ ಆಸೆಯಂತೆ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿ ರೈತರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣ ಗ್ರಾಮದ ವೆಂಕಟರಾಂಜನೇಯ ಅವರ ತೋಟ ಇದೀಗ ಜಗತ್ ಪ್ರಸಿದ್ದಿ ಪಡೆದಿದ್ದು, ತೋಟ ಕಣ್ತುಂಬಿಕೊಳ್ಳಲು ಕೆಲವರು ದೇಶ - ವಿದೇಶಗಳಿಂದ ಆಗಮಿಸುತ್ತಿದ್ದಾರೆ.

ಮಾದರಿ ರೈತ ವೆಂಕಟರಾಮಾಂಜನೇಯ ಅವರು ಮಾತನಾಡಿದರು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣಪುರ ಗ್ರಾಮದ ವೆಂಕಟರಾಮಾಂಜನೇಯ ಅವರ ತಂದೆ ಸುಬ್ಬರಾಯರ ಕನಸನ್ನು ನನಸು ಮಾಡಿದ್ದಾರೆ. ತಮ್ಮ ಹತ್ತು ಎಕರೆ ತೋಟದಲ್ಲಿ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಸತ್ಯನಾರಾಯಣಪುರ ಗ್ರಾಮದಲ್ಲಿ ಪ್ರಗತಿಪರ ರೈತ ವೆಂಕಟರಾಮಾಂಜನೇಯ ಎಂದೇ ಚಿರಪರಿಚಿತರಾಗಿರುವ ಇವರು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

ಇವರ ಹತ್ತು ಎಕರೆ ತೋಟದಲ್ಲಿ 120 ತರಹೆವಾರಿಯ ಅರಣ್ಯ ಮರಗಳು, ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಅರಣ್ಯ ಕೃಷಿಯಲ್ಲಿ ಸಾಗವಾನಿ, ಮಹಾಗನಿ, ಬೇವು, ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಬಿದಿರು, ಬೀಟೆ, ಮತ್ತಿ ಮರಗಳನ್ನು ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ. ಇನ್ನು ಇದಲ್ಲದೆ ಅಡಕೆ ತೋಟ ಮಾಡಿರುವ ಇವರು ಸಾಕಷ್ಟು ಫಸಲು ಪಡೆಯುತ್ತಿದ್ದಾರೆ. ಇನ್ನು ಈ ತೋಟದಲ್ಲಿ ತೆಂಗು, ಕೊಕ್ಕೊ, ಅಡಕೆ ಸೇರಿದಂತೆ ವರ್ಷ ಪೂರ್ತಿ ಕೈಗೆ ಎಟಕುವ ಹಣ್ಣುಗಳ ತಳಿಗಳನ್ನು ಇವರು ಬೆಳೆಸಿದ್ದಾರೆ.

ತೋಟದಲ್ಲಿವೆ 72 ತರಹೆವಾರಿ ಹಣ್ಣುಗಳು: ಇವರ ತೋಟದಲ್ಲಿ ದೇಸಿ ವಿದೇಶಿ ತಳಿಗಳನ್ನು ತರುವ ಮೂಲಕ ಸೀತಾಫಲ, ರಾಮ ಫಲ, ಲಕ್ಷ್ಮಣ ಫಲ, ಹನುಮಾನ್ ಫಲ, ನೇರ್ಲೆ ಹಣ್ಣು, ಮೋಸಂಬಿ, ಚಕ್ಕೋತ್ತ, ಆರೆಂಜ್, ದದ್ಲಿ ಕಾಯಿ, ನಿಂಬೆ, ಗಜ ನಿಂಬೆ, ಎರಡು ರೀತಿಯ ಸಫೋಟ, 30 ಬಗೆಯ ಮಾವಿನ ಹಣ್ಣು, ಸೀಬೆಕಾಯಿ, ಬಾಳೆ, ಸಿಹಿ ಹುಣಸೆ, ಹಲಸಿನ ಹಣ್ಣು, ಮಲೆಯ ಆ್ಯಪಲ್, ವಾಟರ್ ಆ್ಯಪಲ್, ಅಂಜೂರ್, ಸೂರ್ ನಮ್ ಸರ್, ಬಾಡ್ಬರ್ರಸ್ಸರೀ, ಗೋಡಂಬಿ, ನೆಲ್ಲಿಕಾಯಿ ಹೀಗೆ ಹೇಳಿಕೊಂಡು ಹೋದ್ರೇ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.

ಇವರ ತೋಟದಲ್ಲಿ ಒಟ್ಟು 72 ತರಹೆವಾರಿ ಹಣ್ಣುಗಳನ್ನು ಇವರು ಬೆಳೆಸಿದ್ದಾರೆ. ಇದಲ್ಲದೆ ಚಕ್ಕೆ, ಲವಂಗ, ಕರಿಮೆಣಸು ಈ ಎಲ್ಲ ಪದಾರ್ಥಗಳಿರುವ ವಿಶೇಷ ತಳಿಯನ್ನು ಬೆಳೆಸಿರುವುದು ವಿಶೇಷ.

ಇಲ್ಲಿರುವ ಹಣ್ಣು ಕೆಲ ರೋಗಗಳಿಗೆ ರಾಮಬಾಣ: ಮಾದರಿ ರೈತ ವೆಂಕಟರಾಮಾಂಜನೇಯ ಅವರು ಬೆಳೆದಿರುವ ಒಟ್ಟು 72 ತರಹೆವಾರಿ ಹಣ್ಣುಗಳು ಒಂದೊಂದು ರೋಗಕ್ಕೆ ರಾಮಬಾಣವಾಗಿದೆ. ಮಧುಮೇಹ ರೋಗಿಗಳು ಇಲ್ಲಿ ಬೆಳೆದಿರುವ ನೇರ್ಲೆ ಹಣ್ಣನ್ನು ಸೇವಿಸಿದ್ರೆ ಶುಗರ್ ಕಡಿಮೆಯಾಗುತ್ತದಂತೆ.

ಸೀತಾಫಲ ಸೇವಿಸಿದ್ರೆ ಕಣ್ಣಿನ ಕೆಳ ಭಾಗದಲ್ಲಿ ಚರ್ಮ ಕಪ್ಪಾಗುವುದು ಕಡಿಮೆಯಾಗುತ್ತದೆ. ರಾಮಫಲ ಆರೋಗ್ಯಕ್ಕೆ ಹೇಳಿ ಮಾಡಿಸಿರುವ ಹಣ್ಣಾಗಿದ್ದು, ಲಕ್ಷ್ಮಣ ಫಲ ಕ್ಯಾನ್ಸರ್ ಗೆ ಅತ್ಯವಶ್ಯಕವಾಗಿರುವ ಹಣ್ಣು, ಮೋಸಂಬಿ, ಚಕ್ಕೊತ್ತ, ಆರೇಂಜ್ ಸಿಟ್ರೀಕ್ ಬೇಕಾಗುತ್ತದೆ. ಇದು ದೇಹದಲ್ಲಿರುವ ಅನಗತ್ಯ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿಡುತ್ತದೆ.

ಎಲೆಗಳ ತ್ಯಾಜ್ಯವೇ ಗೊಬ್ಬರವಾಗಿ ಬಳಕೆ: ಈ ಎಲ್ಲ ಬೆಳೆಗಳನ್ನು ಬೆಳೆಯಲು ರಾಮಾಂಜನೇಯರವರು ಯಾವುದೇ ರಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ಬದಲಾಗಿ ಈ ತೋಟದಲ್ಲಿ ದೊರೆಯುವ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಿದ್ದಾರೆ. ಇದೀಗ ತೋಟದಲ್ಲಿರುವ ಮರಗಳಿಂದ ಉದುರುವ ಎಲೆಗಳ ತ್ಯಾಜ್ಯವೇ ಬಳಕೆ ಮಾಡಲಾಗುತ್ತಿದೆ. ಇನ್ನು ಈ ಬೆಳೆಸಿರುವ ಗಿಡಗಳನ್ನು ಚಿರಾಪುಂಜಿ, ಪುಣೆ, ರಾಜ್ ಮಂಡ್ರಿಯಿಂದ ತರಿಸಿ ಬೆಳೆಸಲಾಗಿದೆ.

ದೇಶ -ವಿದೇಶದಿಂದ ಹರಿದು ಬರುತ್ತಿದೆ ಜನ ಸಾಗರ: ಕಳೆದ 20 ವರ್ಷಗಳಿಂದ ಕಷ್ಟ ಪಟ್ಟು ವೆಂಕಟರಾಮಾಂಜನೇಯ ಅವರು ತೋಟ ಮಾಡಿದ್ದು, ಇದನ್ನು ಕಣ್ತುಂಬಿಕೊಳ್ಳಲು ಹಾಗೂ ಮಾಹಿತಿ ಪಡೆಯಲು ದೇಶ - ವಿದೇಶಗಳಿಂದ ಜನ ತೋಟಕ್ಕೆ ಭೇಟಿ ನೀಡ್ತಿದ್ದಾರೆ. ಕಳೆದ ವಾರ ಇವರ ತೋಟದಿಂದ ಆಕರ್ಷಿತರಾದ ಜರ್ಮನ್ ಮೂಲದ ದಂಪತಿ ತೋಟಕ್ಕೆ ಭೇಟಿ ನೀಡಿ ಸಮಗ್ರ ಕೃಷಿ ಸೇರಿದ್ದಂತೆ ಅರಣ್ಯ ಕೃಷಿಯನ್ನು ಕಣ್ತುಂಬಿಕೊಂಡು ಮಾಹಿತಿ ಪಡೆದ್ರು. ಇದಲ್ಲದೆ ಕೃಷಿ ಸಂಶೋದನಾ ಕೇಂದ್ರದ ವಿದ್ಯಾರ್ಥಿಗಳು, ದೇಶದ ನಾನಾ ರಾಜ್ಯಗಳಿಂದ ರೈತರ ತೋಟಕ್ಕೆ ಭೇಟಿ ನೀಡ್ತಿರುವುದು ವಿಶೇಷ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ : ಹೌದು, ಅರಣ್ಯ ಕೃಷಿಯಲ್ಲಿ ಸಾಧನೆ ಮಾಡಿರುವ ವೆಂಕಟರಾಮಾಂಜನೇಯ ಅವರ ಸಾಧನೆ ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕೃಷಿಯಲ್ಲಿ ಇವರ ಸಾಧನೆ ಗಮನಿಸಿದ ದುಬೈ, ಥಾಯ್ಲೆಂಡ್​, ವಿಯಟ್ನಾಂ, ರಷ್ಯಾ ದೇಶಗಳಿಂದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಇದಲ್ಲದೇ ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ರತ್ನ, ರೈತ ರತ್ನ, ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ, ಸುವರ್ಣ ಸಾಧನ ಶ್ರೀ, ಬಸವ ರತ್ನ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ನೀಡುವ ಮೂಲಕ ಕೃಷಿ ಡಾಕ್ಟರೇಟ್ ಕೂಡ ನೀಡಿ ವೆಂಕಟರಾಮಾಂಜನೇಯ ಅವರನ್ನು ಗೌರವಿಸಲಾಗಿದೆ.

ಆದರೆ, ಒಂದು ವಿಶೇಷ ಅಂದ್ರೆ ವೆಂಕಟರಾಮಾಂಜನೇಯರವರ ಮನೆಯಲ್ಲಿ ರಾತ್ರಿ ಹೊತ್ತು ಅಡಿಗೆ ಮಾಡುವುದಿಲ್ಲವಂತೆ. ಬದಲಿಗೆ ಇವರ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಸೇವಿಸುವುದು ವಿಶೇಷವಾಗಿದೆ.

ಓದಿ: ಹಾವೇರಿ: ಡ್ರೋನ್ ಮೂಲಕ ಬೆಳೆಗಳಿಗೆ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.