ETV Bharat / state

ಕೋಟಿ ವೆಚ್ಚದಲ್ಲಿ ಅಳವಡಿಸಿದ ಬೀದಿ ದೀಪಗಳು ಬೆಳಗುತ್ತಿಲ್ಲ: ಸಾರ್ವಜನಿಕರಿಂದ ಆಕ್ರೋಶ

author img

By

Published : Aug 16, 2020, 12:21 AM IST

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿರುವ ಬೀದಿ ದೀಪಗಳು ಕೆಟ್ಟು ಹೋಗಿದ್ದು, ಸಾರ್ವಜನಿಕರು ಕಳಪೆ ಕಾಮಗಾರಿಯೆಂದು ಆರೋಪಿಸಿದ್ದಾರೆ.

ಹರಿಹರ
ಹರಿಹರ

ಹರಿಹರ: ನಗರದ ಹೃದಯ ಭಾಗದ ಹಳೆ ಪಿ.ಬಿ ರಸ್ತೆಯ ವಿಭಜಕದ ಮಧ್ಯದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿರುವ ಬೀದಿ ದೀಪಗಳು ಬೆಳಗದೆ ಇರುವುದು ಕಳಪೆ ಕಾಮಗಾರಿ ಮಾಡಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ನೂತನವಾಗಿ ಅಳವಡಿಸಿರುವ ಈ ಬೀದಿ ದೀಪಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ,ಶಾಸಕ ಎಸ್ ರಾಮಪ್ಪ ಹಾಗೂ ದೊಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾಜಿ ಶಾಸಕ ಬಿ.ಪಿ ಹರೀಶ್ ಮತ್ತು ನಗರಸಭಾ ಸದಸ್ಯರು ಸೇರಿ ಗುರುವಾರ ಸಂಜೆ ಉದ್ಘಾಟಿಸಿದರು. ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ರಸ್ತೆಯ ಅರ್ಧ ಭಾಗದ ಲೈಟ್​​ಗಳು ಬಂದ್ ಆಗಿವೆ. ಇನ್ನೂ ಮಾರನೆಯ ದಿನವಾದ ಶುಕ್ರವಾರ ರಾತ್ರಿ ಎಂಟು ಗಂಟೆಯಾದರು ಲೈಟ್​ ಆನ್ ಆಗದೆ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.

ಸುಮಾರು ಒಂದು ಕಿ.ಮೀ ಉದ್ದದಲ್ಲಿ ಒಟ್ಟು 51 ಕಂಬಗಳನ್ನು ಅಳವಡಿಸಿದ್ದು, ಪ್ರತೀ ಕಂಬಕ್ಕೆ 150 ವ್ಯಾಟ್ಸ್ ಪ್ರಕಾಶದ ಎರಡು ಎಲ್ಇಡಿ ಬಲ್ಫ್ ಜೊತೆಗೆ ಎರಡು ಕಂಬಗಳ ಮಧ್ಯ ಒಂದು ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.

ಉದ್ಘಾಟನೆಯಾದ ನಲವತ್ತು ತಾಸುಗಳಲ್ಲಿ ವಿದ್ಯುತ್ ಬಲ್ಬ್​​ ಆನ್ಆಫ್​ಗೆ ಅಳವಡಿಸಿದ ಉಪಕರಣ ಕೆಟ್ಟ, ಕಾರಣ ಶುಕ್ರವಾರ ದೀಪಗಳು ಬಂದ್ ಆಗಿದ್ದವು. ನಂತರ ನಗರಸಭೆ ವಿದ್ಯುತ್ ದೀಪಗಳು ನಿರ್ವಹಣೆ ಮಾಡುವವರು ಬಂದು ಸರಿಪಡಿಸಿ ಲೈಟ್ಸ್ ಆನ್ ಮಾಡಿದರು.

ಈ ಲೈಟ್ಸ್ ಆನ್ ಮಾಡಿದಾಗಲೂ ತಾಲೂಕು ಕಛೇರಿಯ ಮುಂಭಾಗ ಹಾಗೂ ಇನ್ನೂ ಹಲವಾರು ಕಂಬಗಳಲ್ಲಿ ಲೈಟ್ಸ್ ಆನ್‌ ಆಗದೆ ಇರುವುದು ಕಳಪೆ ಕಾಮಗಾರಿಯ ಕೈಗನ್ನಡಿಯಾಗಿದೆ.ಇದರಿಂದಾಗಿ ಉದ್ಘಾಟನೆ ಮಾಡಿರುವ ನಾಯಕರಿಗೂ ಮುಜುಗರ ಉಂಟಾಗುವಂತೆ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.