ETV Bharat / state

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪೂರ್ಣಗೊಳ್ಳದ ಪಠ್ಯಕ್ರಮ: ದಾವಣಗೆರೆ ವಿದ್ಯಾರ್ಥಿಗಳ ಕಲಿಕೆಗೆ ಒತ್ತು

ಕೊರೊನಾ-ಲಾಕ್​ಡೌನ್​​ ಹಿನ್ನೆಲೆ ಶಾಲಾ-ಕಾಲೇಜು ತಡವಾಗಿ ಆರಂಭಗೊಂಡ ಹಿನ್ನೆಲೆ ಎಸ್​​ಎಸ್​ಎಲ್​ಸಿ ಮಕ್ಕಳ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪಠ್ಯಭೋದನೆ ಪೂರ್ಣಗೊಂಡಿಲ್ಲ. ಹಾಗಾಗಿ ಇದೇ ಮೇ ತಿಂಗಳ ಕೊನೆ ತನಕ ಎಸ್ಎಸ್ಎಲ್​​ಸಿ ಮಕ್ಕಳಿಗೆ ತರಗತಿ ಕೈಗೊಂಡು ಪಠ್ಯವನ್ನು ಮುಕ್ತಾಯಗೊಳಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.‌

sslc syllabus not completed yet at davanagere
ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪೂರ್ಣಗೊಳ್ಳದ ಪಠ್ಯಕ್ರಮ; ದಾವಣಗೆರೆ ವಿದ್ಯಾರ್ಥಿಗಳ ಕಲಿಕೆಗೆ ಒತ್ತು
author img

By

Published : Feb 27, 2021, 1:28 PM IST

Updated : Mar 3, 2021, 4:44 PM IST

ದಾವಣಗೆರೆ: ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ವಕ್ಕರಿಸಿದ ಹಿನ್ನೆಲೆ ಲಾಕ್​ಡೌನ್​​ ಘೋಷಿಸಲಾಯಿತು. ಪರಿಣಾಮ ಶಾಲಾ-ಕಾಲೇಜು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳು ಕೆಲ ದಿನಗಳ ಕಾಲ ಬಂದ್​ ಆಗಿದ್ದವು. ಸದ್ಯ ಹಂತ-ಹಂತವಾಗಿ ಎಲ್ಲವೂ ಆರಂಭಗೊಂಡಿದ್ದು, ಪ್ರತೀ ಕ್ಷೇತ್ರಗಳು ಸುಧಾರಿಸಿಕೊಳ್ಳುತ್ತಿದೆ. ಕೊರೊನಾ-ಲಾಕ್​ಡೌನ್​ ಶಿಕ್ಷಣ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಶೈಕ್ಷಣಿಕ ವರ್ಷಗಳು ಮುಗಿಯುತ್ತಾ ಬಂದರೂ ಅನೇಕ ಕಡೆಗಳಲ್ಲಿ ಪಠ್ಯ ಪೂರ್ಣಗೊಂಡಿಲ್ಲ. ಇದರಿಂದ ಬೆಣ್ಣೆನಗರಿ ಕೂಡ ಹೊರತಾಗಿಲ್ಲ. ದಾವಣಗೆರೆ ಶೈಕ್ಷಣಿಕ ಕ್ಷೇತ್ರದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ..

ಪೂರ್ಣಗೊಳ್ಳದ ಪಠ್ಯಕ್ರಮ, ಪ್ರತಿಕ್ರಿಯೆ

ಕೊರೊನಾ ಹಾವಳಿಯ ನೇರ ಪರಿಣಾಮವೀಗ ಶಾಲಾ ಮಕ್ಕಳ ಪಠ್ಯದ ಮೇಲೆ ಬಿದ್ದಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದ್ರು ಕೂಡ ಬೆಣ್ಣೆ ನಗರಿ ಶಾಲೆಗಳ ಪಠ್ಯವನ್ನು ಪೂರ್ಣಗೊಳಿಸಲು ಮಾತ್ರ ಸಾಧ್ಯವಾಗಿಲ್ಲ. ಹಾಗಾಗಿ ಇದೇ ಮೇ ತಿಂಗಳ ಕೊನೆ ತನಕ ಎಸ್ಎಸ್ಎಲ್​​ಸಿ ಮಕ್ಕಳಿಗೆ ತರಗತಿ ಕೈಗೊಂಡು ಪಠ್ಯವನ್ನು ಮುಕ್ತಾಯಗೊಳಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.‌

ಶೇ.40 ರಷ್ಟು ಪಠ್ಯಕ್ರಮ ಪೂರ್ಣ:

ಹೌದು, ಕೊರೊನಾ ಭಯದಿಂದ ಕೆಲ ತಿಂಗಳುಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿತು. 9 ತಿಂಗಳ ಬಳಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಹಸಿರು ನಿಶಾನೆ‌ ತೋರಿತು‌. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಪಠ್ಯದ‌ ಮೇಲೆ ಬೀರಿದ್ದು, ನಿಗದಿತ ಸಮಯಕ್ಕೆ ಎಸ್​ಎಸ್​​ಎಲ್​​ಸಿಯ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ದಾವಣಗೆರೆಯ ಶೇ. 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಕೇವಲ ಶೇ. 40 ರಿಂದ 45 ರಷ್ಟು ಪಠ್ಯಕ್ರಮ ಮುಕ್ತಾಯವಾಗಿದೆ.

ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿದೆ:

ಉಳಿದ ಶೇ. 60 ರಷ್ಟು ಪಠ್ಯಕ್ರಮವನ್ನು ಇದೇ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ. ಮೇ ತಿಂಗಳಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಿದ‌ ಬಳಿಕ ಮಕ್ಕಳು ಪರೀಕ್ಷೆಗೆ ಹೆದರದಂತೆ ಮಾಡಿದ ಪಠ್ಯವನ್ನು ಪುನರ್​​ಮನನ ಮಾಡಿ, ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಕ್ರಮ ವಹಿಸಲಾಗಿದೆ.

ಖಾಸಗಿ ಶಾಲೆಗಳ ಪರಿಸ್ಥಿತಿ:

ಖಾಸಗಿ ಶಾಲೆಗಳು ಕೂಡ ಆನ್​ಲೈನ್​​​ನಲ್ಲೇ ಶೇ. 60 ರಿಂದ 70 ರಷ್ಟು ಪಠ್ಯಕ್ರಮವನ್ನು ಪೂರ್ಣಗೊಳಿಸಿದ್ದು, ಮೇ ತಿಂಗಳೊಳಗೆ ಎಲ್ಲಾ ಪಠ್ಯಕ್ರಮವನ್ನು ಮುಕ್ತಾಯಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಶೈಕ್ಷಣಿಕ ವರ್ಷ ಪೂರ್ಣಗುಳ್ಳುತ್ತಾ ಬಂದರೂ ಕೂಡ ಶಾಲೆ ತಡವಾಗಿ ಆರಂಭಗೊಂಡ ಹಿನ್ನೆಲೆ ಎಸ್​ಎಸ್ಎಲ್​ಸಿ ಮಕ್ಕಳಿಗೆ ಸರಿಯಾದ ಪಾಠ ಪ್ರವಚನಗಳು ದೊರೆತಿಲ್ಲ. ಆನ್​​ಲೈನ್​​ನಲ್ಲೇ ಪಾಠಪ್ರವಚನ ನಡೆದಿದ್ದರಿಂದ‌ ಸಾಕಷ್ಟು ಮಕ್ಕಳು ಹೈರಾಣಾಗಿದ್ದಾರೆ‌. ಈ ಜನವರಿಯಿಂದ ಆರಂಭ ಆಗಿರುವ ಎಸ್ಎಸ್ಎಲ್​ಸಿ ತರಗತಿಗಳಿಗೆ ಶೇ. 80% ರಷ್ಟು ಮಕ್ಕಳು ಶಾಲೆಗೆ ಆಗಮಿಸಿತ್ತಿದ್ದಾರೆ. ಸಂಪೂರ್ಣ ಪಠ್ಯಕ್ರಮವನ್ನು ಪೂರೈಸಿ ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆಗೆ ಕೂರಿಸಬೇಕಾಗಿದೆ.

ಓದಿ: 100 ದಿನಗಳ ಕಲಿಕಾ ಕ್ರಿಯಾಯೋಜನೆ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಣ ಇಲಾಖೆ

ಎಸ್​ಎಸ್​​ಎಲ್​ಸಿ ಪರೀಕ್ಷೆ ಮಕ್ಕಳ ಭವಿಷ್ಯ ನಿರ್ಧರಿಸಲಿದ್ದು, ಸರ್ಕಾರ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸದೆ ಪರೀಕ್ಷೆ ನಡೆಸಬಾರದು. ಅವರ ಭವಿಷ್ಯ ರೂಪಿಸುವಂತಹ ನಿರ್ಧಾರ‌ ಮಾಡಿ ಸೂಕ್ತ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂಬುದು ವಿದ್ಯಾರ್ಥಿಗಳ ಪೋಷಕರ‌ ವಾದವಾಗಿದೆ.

Last Updated : Mar 3, 2021, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.