ETV Bharat / state

ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಜಾತಿಗೆ ಅಷ್ಟೇ ಸೀಮಿತ: ಎಸ್​ ಎಸ್ ಮಲ್ಲಿಕಾರ್ಜುನ್ ಟಾಂಗ್​

ಬಿಜೆಪಿಯಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಬೇಸತ್ತಿದ್ದಾರೆ, ಬಿಎಸ್​ವೈ ಅವರನ್ನು ಮೂಲೆಗುಂಪು ಮಾಡಿದ್ದಾರೆಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಆರೋಪಿಸಿದರು.

cng
ಎಸ್​ಎಸ್​ ಮಲ್ಲಿಕಾರ್ಜುನ್​
author img

By

Published : Apr 17, 2023, 3:07 PM IST

Updated : Apr 17, 2023, 3:46 PM IST

ಎಸ್​ ಎಸ್ ಮಲ್ಲಿಕಾರ್ಜುನ್

ದಾವಣಗೆರೆ: ಬಿಜೆಪಿಯಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನಲ್ಲಿ ಬೇಸತ್ತಿದ್ದಾರೆ, ಬಿಎಸ್​ವೈ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯ ಅವರ ನಿವಾಸದಲ್ಲಿ ಶೆಟ್ಟರ್ ಕಾಂಗ್ರೆಸ್​ಗೆ ಬಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಆಪರೇಷನ್ ಕಾಂಗ್ರೆಸ್ ಮಾಡಿಲ್ಲ, ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ದಾರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 17 ಜನ ಅವರ ಪಕ್ಷಕ್ಕೆ ಹೋದರು, ಇದೀಗ ಬಿಜೆಪಿಯವರಿಗೆ ಬ್ಯಾಕ್ ಫೈರ್ ಆಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷಕ್ಕೆ ಬಂದಿದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಒಳ್ಳೇ ಬೆಂಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತರು ಕೂಡ ಬೇಸತ್ತಿದ್ದಾರೆ. ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ನಿಡುವುದರಲ್ಲಿ ವೀರಶೈವ ಲಿಂಗಾಯತರಿಗೆ ತಾರತಮ್ಯ ಮಾಡಲಾಗುತ್ತಿದೆ. ಬಿ ಎಸ್​ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಬಿಎಸ್​ವೈ ಅವರನ್ನು ಇಟ್ಟುಕೊಳ್ಳಬೇಕಲ್ಲಾ ಎಂದು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಲಿಂಗಾಯತ ನಾಯಕರನ್ನು ಕಾಂಗ್ರೆಸ್ ದೃವೀಕರಣ ಮಾಡ್ತಿದೆಯೇ?: ಇನ್ನು ಲಿಂಗಾಯತ ನಾಯಕರನ್ನು ಕಾಂಗ್ರೆಸ್ ದೃವೀಕರಣ ಮಾಡುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಮಗೆ ಹೈಕಮಾಂಡ್ ಅಂತಿದೆ. ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಜಾತಿಗೆ ಅಷ್ಟೇ ಸೀಮಿತವಾಗಿದೆ. ಕಾಂಗ್ರೆಸ್ ಹಾಗಲ್ಲ ಎಲ್ಲ ಜಾತಿ ಧರ್ಮವರನ್ನು ಕರೆದೊಯ್ಯುವ ಪಕ್ಷ. ಇನ್ನು ಹೈಕಮಾಂಡ್ ಯಾರನ್ನು ಸೂಚಿಸುತ್ತದೆಯೋ ಅವರನ್ನು ಸಿಎಂ ಮಾಡ್ತಾರೆ. ಇನ್ನು ಬಿಜೆಪಿ ಲಿಂಗಾಯಿತರನ್ನು ಕಡೆಗಾಣಿಸಿದ್ದಕ್ಕೆ ನಾಯಕರು ಹೊರ ಬರುತ್ತಿರುದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅವರು ಪಕ್ಷದಲ್ಲಿ ಇದ್ದಿದ್ದರಿಂದಲೇ ಲಿಂಗಾಯತ ನಾಯಕರು ಸಾಕಷ್ಟು ಆಸೆಗಳನ್ನು ಇಟ್ಟಿಕೊಂಡಿದ್ದರು. ಅದರೆ, ಇದೀಗ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗಿದೆ ಎಂದು ಟೀಕಿಸಿದರು. ಇನ್ನು ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳಿಗೆ ನಾವು ಟಿಕೆಟ್ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಹೇಳಿದರು.

ಮಾಯಕೊಂಡ ಕ್ಷೇತ್ರದ ಅಭ್ಯರ್ಥಿ ಕೂಡ ನಮ್ಮ ಕಾಂಗ್ರೆಸ್ ನಲ್ಲಿದ್ದರು, ಇದೇ ಸಂಸದ ಜಿಎಂ ಸಿದ್ದೇಶ್ವರ್ ಕೂಡ ಕಾಂಗ್ರೆಸ್ ನಲ್ಲಿದ್ದವರು, ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಓಡಾಡಿದವರು ಎಂದು ನೆನಪು ಮಾಡಿಕೊಟ್ಟರು. ಪ್ರಹ್ಲಾದ್​ ಜೋಶಿ, ಸಿಎಂ ಆಗ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಆ ವಿಚಾರ ಅವರ ಪಕ್ಷಕ್ಕೆ ಬಿಟ್ಟದ್ದು, ಯಡಿಯೂರಪ್ಪ ಅವರನ್ನು ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಯನ್ನಾಗಿ ಮಾಡಿ ಬಿಜೆಪಿ ಇಟ್ಟುಕೊಂಡಿದೆ ಎಂದು ಇದೇ ವೇಳೆ ವ್ಯಂಗ್ಯವಾಡಿದರು.

shettar
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಯಾಣಿಸಿದ ಹೆಲಿಕಾಪ್ಟರ್​

ದಾವಣಗೆರೆಯಿಂದ ತರಾತುರಿಯಲ್ಲಿ ಶೆಟ್ಟರ್ ಪ್ರಯಾಣ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ದಾವಣಗೆರೆಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತರಾತುರಿಯಲ್ಲಿ ಹುಬ್ಬಳ್ಳಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದರು. ಬೆಂಗಳೂರಿನಿಂದ ಹುಬ್ಬಳಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ನಲ್ಲಿ ಮಾರ್ಗ ಮಧ್ಯೆ ದಾವಣಗೆರೆಗೆ ಆಗಮಿಸಿದ್ದ ಜಗದೀಶ್ ಶೆಟ್ಟರ್, ಹೆಲಿಕಾಪ್ಟರ್​ನಿಂದ ಇಳಿಯದೇ ಶಿವಶಂಕರಪ್ಪ ಪುತ್ರ ಗಣೇಶರನ್ನು ಇಳಿಸಿ ಹಾಗೇಯೆ ಪ್ರಯಾಣ ಬೆಳೆಸಿದರು. ಕಾಂಗ್ರೆಸ್ ಬಿ ಫಾರ್ಮ ಪಡೆದು ಹುಬ್ಬಳ್ಳಿಯತ್ತ ಪ್ರಯಾಣ ಮಾಡುತ್ತಿದ್ದ ಶೆಟ್ಟರ್ ಅವರು ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಯಮಕನಮರಡಿ ಪಟ್ಟಕ್ಕಾಗಿ ಕಾದಾಟ: ಮುಂದುವರಿಯುತ್ತಾ ಸತೀಶ್ ಜಾರಕಿಹೊಳಿ ಗೆಲುವಿನ ನಾಗಾಲೋಟ?

Last Updated : Apr 17, 2023, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.