ದಾವಣಗೆರೆ: ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಕಚೇರಿಯಲ್ಲಿ ಶಾಂತಿ ಹೋಮ ನಡೆಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಶಾಂತಿ ಹೋಮ ನಡೆಸಲಾಗಿದೆ. ಕಳೆದ ತಿಂಗಳು 21ರಂದು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿಯೇ ಶಿವಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಓದಿ-ರಾಕಿ ಭಾಯ್ ಎಂಟ್ರಿಗೆ ಡೇಟ್ ಫಿಕ್ಸ್.. ಹಳೆ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರಚಾರ..
ಇಲಾಖೆಯಲ್ಲಿ ಪತ್ರಾಂಕಿತ ಮ್ಯಾನೇಜರ್ ಆಗಿದ್ದ ಆರ್.ಶಿವಕುಮಾರ್ ಆತ್ಮಹತ್ಯೆಯಿಂದಾಗಿ ಜಿಲ್ಲಾಡಳಿತದ ಸಿಬ್ಬಂದಿ ಭಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೋಮ ನಡೆಸಲಾಗಿದೆ.
ಮಾನಸಿಕ ಖಿನ್ನತೆಯಿಂದ ಶಿವಕುಮಾರ್ ಸಾವಿಗೆ ಶರಣಾಗಿದ್ದರು. ಸಿಬ್ಬಂದಿಯ ಆತಂಕ ದೂರ ಮಾಡಲು ಜಿಲ್ಲಾಡಳಿತದಿಂದ ಶಾಂತಿ ಹೋಮವನ್ನು ಪುರೋಹಿತರ ನೇತೃತ್ವದಲ್ಲಿ ನೆರವೇರಿಸಲಾಗಿದೆ.