ETV Bharat / state

ಎಸ್ ಪಿ ಬಾಲಸುಬ್ರಹ್ಮಣ್ಯಂ ಗುಣಮುಖರಾಗಲೆಂದು ದಾವಣಗೆರೆಯಲ್ಲಿ ವಿಶೇಷ ಪೂಜೆ - Davanagere latest news

ಚಿಕಿತ್ಸೆಯಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಗುಣಮುಖರಾಗಲೆಂದು ಪ್ರಾರ್ಥಿಸಿ ದುರ್ಗಾಂಬಿಕಾ ದೇಗುಲದಲ್ಲಿ ತಾಲೂಕು ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರು ವಿಶೇಷ ಪೂಜೆ ಸಲ್ಲಿಸಿದರು.

Special worship in davanagere
Special worship in davanagere
author img

By

Published : Aug 19, 2020, 6:37 PM IST

ದಾವಣಗೆರೆ: ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್. ಪಿ.‌ ಬಾಲಸುಬ್ರಹ್ಮಣ್ಯಂ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ನಗರದ ದುರ್ಗಾಂಬಿಕಾ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರು ಪೂಜೆ ಸಲ್ಲಿಸಿ ಎಸ್ ಪಿ ಬಿ ಅವರು ಕೊರೊನಾ‌ ಮುಕ್ತರಾಗಿ, ಆರೋಗ್ಯವಂತರಾಗಿ ಆದಷ್ಟು ಬೇಗ ಆಸ್ಪತ್ರೆಯಿಂದ ಹೊರ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಗಾನಸುಧೆ ಮೂಲಕ ಎಲ್ಲರನ್ನು ರಂಜಿಸಿದ್ದ ಎಸ್ ಪಿ ಬಿ ಶೀಘ್ರ ಗುಣಮುಖರಾಗಿ ಬರಬೇಕು. ದೇವಿಯು ಬಾಲಸುಬ್ರಹ್ಮಣ್ಯಂ ಅವರಿಗೆ ಆದಷ್ಟು ಬೇಗ ಗುಣಮುಖರಾಗುವ ಶಕ್ತಿಯನ್ನು ನೀಡಬೇಕು ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು ಎಂದು ಆರ್ಕೆಸ್ಟ್ರಾ ಮಾಲೀಕರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.