ETV Bharat / state

ಹೀರೋ ಆಗೋಣ ಅಂದುಕೊಂಡಿದ್ದರೆ ಬಿಟ್ಟು ಬಿಡಿ : ರೌಡಿ ಶೀಟರ್​ಗಳಿಗೆ ಎಸ್​ಪಿ ರಿಷ್ಯಂತ್ ಖಡಕ್‌ ವಾರ್ನಿಂಗ್.. - ದಾವಣಗೆರೆಯಲ್ಲಿ ರೌಡಿ ಶೀಟರ್​ಗಳ ಪರೇಡ್

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ರೌಡಿ ಶೀಟರ್​ಗಳ ಪರೇಡ್ ನಡೆಸಿದ ಎಸ್​ಪಿ ರಿಷ್ಯಂತ್ ಅವರು ಇಂದು ರೌಡಿಗಳಿಗೆ ಅಡ್ಡದಾರಿಯಲ್ಲಿ ಹೋಗದಂತೆ ವಾರ್ನ್ ಮಾಡಿದ್ದಾರೆ.

sp-rishyant-warning-to-rowdy-sheeters-in-davanagere
ರೌಡಿ ಶೀಟರ್​ಗಳಿಗೆ ಎಸ್​ಪಿ ರಿಷ್ಯಂತ್ ಖಡಕ್‌ ವಾರ್ನಿಂಗ್
author img

By

Published : Aug 26, 2021, 5:58 PM IST

ದಾವಣಗೆರೆ: ಬದಲಾವಣೆ ಆಗಲು ಅವಕಾಶ ಇದೆ. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಿ ಹಣ ಸಂಪಾದಿಸಿ ಹೀರೋ ಆಗೋಣ ಎಂದುಕೊಂಡಿದ್ರೇ ಬಿಟ್ಟು ಬಿಡಿ. ಇಲ್ಲ ಅಂದ್ರೆ ನಿಮ್ಮನ್ನು ಸರಿ ದಾರಿಗೆ ತರೋದು ನಮಗೆ ಗೊತ್ತಿದೆ ಎಂದು ಎಸ್​ಪಿ ರಿಷ್ಯಂತ್ ಅವರು ರೌಡಿ ಶೀಟರ್​ಗಳಿಗೆ ಖಡಕ್​​ ಎಚ್ಚರಿಕೆ ನೀಡಿದರು.

ರೌಡಿಗಳಿಗೆ ಎಸ್​ಪಿ ರಿಷ್ಯಂತ್ ಖಡಕ್​ ವಾರ್ನಿಂಗ್​

ನಗರದ ಹೈಸ್ಕೂಲ್ ಮೈದಾನದಲ್ಲಿ ರೌಡಿ ಶೀಟರ್​ಗಳ ಪರೇಡ್ ನಡೆಸಿದ ಅವರು, ನೆರೆದಿದ್ದ ರೌಡಿಗಳಿಗೆ ಸರಿ ದಾರಿಯಲ್ಲಿ ನಡೆಯುವಂತೆ ಪಾಠ ಮಾಡಿದರು. ನಂತರ ಪಾಲಿಕೆ ಸದಸ್ಯ ಶ್ರೀನಿವಾಸ್ ಹಾಗೂ ಸಂತೋಷ್ ಎಂಬ ರೌಡಿ ಶೀಟರ್​ಗಳನ್ನು ವಿಚಾರಿಸಿ ಮಾಹಿತಿ ಪಡೆದರು. ಅಲ್ಲದೆ, ಬಾಲ ಬಿಚ್ಚದಂತೆ ಸರಿ ದಾರಿಯಲ್ಲಿ ನಡೆಯುವಂತೆ ತಿಳಿ ಹೇಳಿದರು.

ಹೀಗೆ ಮುಂದುವರೆದ್ರೇ ನಾನು ಕೇಳಲ್ಲ: ರೌಡಿ ಶೀಟರ್​ಗಳಿಗೆ ಮನವರಿಕೆ ಮಾಡಲು ಮಾತು ಆರಂಭಿಸಿದ ಎಸ್ಪಿ ರಿಷ್ಯಂತ್, ಅನಧಿಕೃತ ದಂಧೆಗಳನ್ನು ಮಾಡೋದು, ಹತ್ತು ಜನ ಹುಡುಗರನ್ನು ಹಿಂದೆ ಹಾಕಿಕೊಂಡು ಮೆರಿತೀನಿ ಅಂದ್ರೆ ನಾನು ಕೇಳಲ್ಲ. ಯಾವುದೇ ಗ್ಯಾಂಗ್​ಗಳು ನಿಮಗೆ ಬೇಕಾಗಿಲ್ಲ. ನಿಮ್ಮ ಗ್ಯಾಂಗ್ ನಲ್ಲಿರುವ ಹುಡುಗರನ್ನು ಹಿಂದೆ ಹಾಕಿಕೊಂಡು ಹಾಳ್ ಮಾಡ್ಬೇಡಿ. ಹೀಗೆ ಮುಂದುವರೆದ್ರೇ ಯಾರನ್ನು ಕೂಡ ನಾವು ಬಿಡಲ್ಲ. ಎಲ್ರೂ ನೆನಪಿಟ್ಟುಕೊಳ್ಳಿ. ನೀವು ನಮ್ಮ ಲಿಸ್ಟ್​ನಲ್ಲಿದ್ದಿರಾ, ಯಾರದ್ದೋ ಬೆಂಬಲ ಇಟ್ಕೊಂಡು ಹೀಗೆ ಮುಂದುವರೆದ್ರೇ ನಾನು ಕೇಳಲ್ಲ ಎಂದು ಖಡಕ್ ಆಗಿ ವಾರ್ನ್​ ಮಾಡಿದರು.

ಓದಿ: ಪರಪ್ಪನ ಅಗ್ರಹಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.