ETV Bharat / state

ಮಾಸ್ಕ್ ಧರಿಸದೇ ರಸ್ತೆಗಿಳಿದರೆ ಕಠಿಣ ಕ್ರಮ: ಎಸ್​ಪಿ ಖಡಕ್​ ವಾರ್ನಿಂಗ್​ - davanagre sp news

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 81 ಕಂಟೈನ್​ಮೆಂಟ್ ಝೋನ್​ಗಳಿದ್ದು, ಆ ಪ್ರದೇಶಗಳಲ್ಲಿ ಯಾರೂ ಬೇಕಾಬಿಟ್ಟಿಯಾಗಿ ಓಡಾಡಬಾರದು. ಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿರುವ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಲೇಬೇಕು ಎಂದು ಪೊಲೀಸ್​ ವರಿಷ್ಟಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

SP hanumantaraya
ಮಾಸ್ಕ್ ಧರಿಸದೇ ರಸ್ತೆಗಿಳಿದರೆ ಕಠಿಣ ಕ್ರಮ
author img

By

Published : Jul 14, 2020, 4:05 PM IST

Updated : Jul 14, 2020, 4:59 PM IST

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾಸ್ಕ್ ಧರಿಸದೇ ರಸ್ತೆಗಿಳಿದರೆ ಕ್ರಮ ಅನಿವಾರ್ಯ ಎಂದು ಎಸ್​ಪಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಟ್ಟು 81 ಕಂಟೈನ್​ಮೆಂಟ್ ಝೋನ್​ಗಳಿದ್ದು, ಆ ಪ್ರದೇಶಗಳಲ್ಲಿ ಯಾರೂ ಬೇಕಾಬಿಟ್ಟಿಯಾಗಿ ಓಡಾಡಬಾರದು. ಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿರುವ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಲೇಬೇಕು ಎಂದರು.

ಕೋವಿಡ್​ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ

ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾತನಾಡಿ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದರು. ಲಾಕ್​ಡೌನ್ ಅವಧಿಯಲ್ಲಿ ನಾನು ಮತ್ತು ಎಸ್​ಪಿ ಲಾಠಿ ಹಿಡಿದು ಭಯ ಹುಟ್ಟಿಸಿದ್ದೇವೆ‌. ಆದರೂ ಜನರು ಮಾಸ್ಕ್ ಧರಿಸದೇ ಬಂದರೆ, ಸ್ಯಾನಿಟೈಸರ್ ಬಳಕೆ ಮಾಡದಿದ್ದರೆ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ ಎಂದರು.

Last Updated : Jul 14, 2020, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.