ETV Bharat / state

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜು: ರಾಹುಲ್ ಗಾಂಧಿ ಭಾಗಿ, ಐದು ಲಕ್ಷ ಜನ ಸೇರುವ ಸಾಧ್ಯತೆ - siddaramaiah s 75th birthday celebration in davangere

ಇದೇ ಆಗಸ್ಟ್ 3ರಂದು ವಿಪಕ್ಷನಾಯಕ ಸಿದ್ದರಾಮಯ್ಯ ತಮ್ಮ 75ನೇ ವಸಂತಕ್ಕೆ ಕಾಲಿಡುತ್ತಿದ್ದು, ಇವರ 75 ನೇ ವರ್ಷದ ಹುಟ್ಟುಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲು ಕಾಂಗ್ರೆಸ್ ಮತ್ತು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

siddaramaiah-s-75th-birthday-celebration-in-davangere
ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜು : ರಾಹುಲ್ ಗಾಂಧಿ ಭಾಗಿ, ಐದು ಲಕ್ಷ ಜನ ಸೇರುವ ಸಾಧ್ಯತೆ
author img

By

Published : Jul 9, 2022, 9:10 PM IST

ದಾವಣಗೆರೆ : ವಿಪಕ್ಷನಾಯಕ ಸಿದ್ದರಾಮಯ್ಯ ಅವರು ತಮ್ಮ 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ದೇವರಾಜ್ ಅರಸು ಅವರ ಬಳಿಕ ಯಶಸ್ವಿಯಾಗಿ ಐದು ವರ್ಷಕಾಲ ಸರ್ಕಾರ ನಡೆಸಿದ ಪ್ರಬುದ್ಧ ರಾಜಕಾರಣಿ ಸಿದ್ದರಾಮಯ್ಯ. ಇವರ 75 ನೇ ವರ್ಷದ ಹುಟ್ಟುಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲು ಕಾಂಗ್ರೆಸ್ ಮತ್ತು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಸುಮಾರು ಐದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅವರ ಅಭಿಮಾನಿಗಳು ಬೆಣ್ಣೆ ನಗರಿ ಯಲ್ಲಿ ಅಮೃತ ಮಹೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ.

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜು : ರಾಹುಲ್ ಗಾಂಧಿ ಭಾಗಿ, ಐದು ಲಕ್ಷ ಜನ ಸೇರುವ ಸಾಧ್ಯತೆ

ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಂದೂ ತಮ್ಮಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿಲ್ಲವಂತೆ. ಆದರೆ, ಈ ಬಾರಿ ಅವರ 75 ನೇ ವರ್ಷದ ಹುಟ್ಟುಹಬ್ಬವನ್ನು ಅಮೃತ ಮಹೋತ್ಸವ ಹೆಸರಿನಲ್ಲಿ ಆಚರಣೆ ಮಾಡಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ. ಇನ್ನು ಕಾರ್ಯಕ್ರಮ ನಡೆಸಲು ಅಮೃತಮಹೋತ್ಸವ ಸಮಿತಿಯ ಸದಸ್ಯರಾದ ಬಸವರಾಜ ರಾಯರೆಡ್ಡಿ, ಹೆಚ್ ಸಿ ಮಹದೇವಪ್ಪ, ರಾಜಣ್ಣ, ಜಯಮಾಲ, ಉಮಾಶ್ರೀ , ಮಲ್ಲಿಕಾರ್ಜುನ, ಭೈರತಿ ಸುರೇಶ್ ಹಾಗೂ ಶಾಸಕರಾದ ರಾಮಪ್ಪ ಅವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಆಗಸ್ಟ್ 3 ರಂದು ಸಿದ್ದರಾಮಯ್ಯ 75ನೇ ಅಮೃತ ಮಹೋತ್ಸವ : ಸಿದ್ದರಾಮಯ್ಯ 75ನೇ ಅಮೃತ ಮಹೋತ್ಸವ ಎಂಬ ಸಮಿತಿ ಮಾಡಿಕೊಂಡಿರುವ ಕಾಂಗ್ರೆಸ್ ಆಗಸ್ಟ್ 03 ಕ್ಕೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ 75 ಅಮೃತಮಹೋತ್ಸವ ಕಾರ್ಯಕ್ರಮ ನೆರವೇರಿಸಲು ಸಿದ್ಧರಾಗಿದ್ದಾರೆ.

ಈ ಸಮಿತಿಯಲ್ಲಿ ಕಾಂಗ್ರೆಸ್ ನ ಮಾಜಿ ಸಚಿವರು ಹಾಗು ಹಾಲಿ ಶಾಸಕರಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವೆ ಉಮಾಶ್ರೀ, ಈ ಕಾರ್ಯಕ್ರಮದ ಉದ್ದೇಶ ರಾಜಕೀಯ ಶಕ್ತಿ ಪ್ರದರ್ಶನ ಅಲ್ಲ, ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ.

ಇದೊಂದು ಸಂಭ್ರಮದ ಕಾರ್ಯಕ್ರಮ. ಸಾಮಾಜಿಕ ನ್ಯಾಯ ಪರ ಹೋರಾಟ ಮಾಡಿದಂತವರು , ತಮ್ಮ ಜೀವನವನ್ನು ಸಾರ್ವಜನಿಕ ಜೀವನದಲ್ಲಿ ಕಳೆದಂತವರು ಸಿದ್ದರಾಮಯ್ಯ. ಅವರ ಹುಟ್ಟು ಹಬ್ಬವನ್ನು ಅಮೃತಮಹೋತ್ಸವವಾಗಿ ನೆರವೇರಿಸುವುದರಲ್ಲಿ ಏನೂ ತಪ್ಪಿಲ್ಲ ಎಂದು ಉಮಾ ಶ್ರೀ ಹೇಳಿದರು.

ಅಮೃತ ಮಹೋತ್ಸವದಲ್ಲಿ ಪ್ರಮುಖರು ಭಾಗಿ : ದಾವಣಗೆರೆಯ ಕೆಹೆಚ್ ಬಿ ಕಾಲೋನಿ ಬಳಿಯ ಶಾಮನೂರು ಶಿವಶಂಕರಪ್ಪಗೆ ಸೇರಿದ 100 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಣದೀಪ್ ಸುರ್ಜೇವಾಲ, ವೇಣುಗೋಪಾಲ್ ಸೇರಿ ಸಾಕಷ್ಟು ಜನ ಸೇರುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವೆ ಜಯಮಾಲಾ , ದೇವರಾಜ್ ಅರಸು ಬಳಿಕ ಐದು ವರ್ಷಗಳ ಕಾಲಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದು ಸಿದ್ದರಾಮಯ್ಯ. ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಏನೆಲ್ಲ ಘೋಷಣೆ ಮಾಡಿದ್ದರೋ ಅದನ್ನೆಲ್ಲ ಪೂರೈಸಿದ್ದಾರೆ. ಮಹಿಳೆಯರಿಗೆ, ರೈತರಿಗೆ ವಿಶೇಷ ಸ್ಥಾನ ಮಾನ ನೀಡಿದರು. ಈ ಅಮೃತಮಹೋತ್ಸವ ಕಾರ್ಯಕ್ರಮ ನೆರವೇರುತ್ತಿರುವುದು ನಮ್ಮ ಕಾಂಗ್ರೆಸ್ ನಾಯಕರಿಗೆ ಸಂಭ್ರಮ. ಇನ್ನು ಅವರು ಸಿಎಂ ಆಗುವುದನ್ನು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಆಗಲು ಯೋಗ ಬೇಕು ಎಂದು ಹೇಳಿದರು.

ವಿಧಾನ ಸಭೆ ಚುನಾವಣೆಗೆ ಹಿನ್ನಲೆ ಕಾಂಗ್ರೆಸ್ ಕಸರತ್ತು : ಒಟ್ಟಾರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಮಧ್ಯ ಕರ್ನಾಟಕದಿಂದ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದೆ.

ಇದಲ್ಲದೇ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರಗಳ ದುರಾಡಳಿತ, ವೈಫಲ್ಯಗಳನ್ನು ಕಾರ್ಯಕ್ರಮಕ್ಕೆ ಆಗಮಿಸುವ ಜನ ಸಾಮಾನ್ಯರ ಮುಂದೆ ಬಿಚ್ಚಿಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಅದೇನೇ ಆಗಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಕೈ ನಾಯಕರು ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೋ ಕಾದು ನೋಡಬೇಕು.

ಓದಿ : ಕೊಡಗು: ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಕೆಟ್ಟು ನಿಂತ ಬೋಟ್, ಆಸರೆಯಾಯ್ತು ಮರದ ಕೊಂಬೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.