ದಾವಣಗೆರೆ: ಜೋಕರ್ಗಳ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಬೇಕು. ಜೋಕರ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಹೆಸರು ಹೇಳದೆ ಪರೋಕ್ಷವಾಗಿ ಶಾಸಕ ಬಸನಗೌಡ ಯತ್ನಾಳ್ ಗೆ ಪಂಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಟಾಂಗ್ ನೀಡಿದರು.
ಶ್ರೀ ವಚನಾನಂದ ಸ್ವಾಮೀಜಿಗಳ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಯತ್ನಾಳ್ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಅವರು, ಪ್ರತಿನಿತ್ಯ ಒಂದೇ ಜೋಕ್ ಹೇಳಿದರೆ ಜನರು ನಗೋದಿಲ್ಲ, ಹೊಸ ಹೊಸ ಜೋಕ್ ಹೇಳಿದರೆ ಆ ಜೋಕರ್ ಗೆ ಜಾಬ್ ಸಿಗುತ್ತೆ. ಇಲ್ಲವಾದ್ರೆ ಅವರನ್ನು ಜನ ಉದಾಸೀನ ಮಾಡ್ತಾರೆ. ಅದೇ ರೀತಿ ಆ ಜೋಕರ್ಗಳನ್ನು ನಾವು ಕೂಡ ಉದಾಸೀನ ಮಾಡಬೇಕು ಎಂದು ಮಾತಿನಲ್ಲೇ ತಿವಿದರು.
ಜೋಕರ್ಗಳನ್ನು ಜೋಕ್ ಮಾಡಲು ಬಿಟ್ಟು, ನಾವು ಮೀಸಲಾತಿ ಕಡೆ ಗಟ್ಟಿಯಾಗಿ ನಿಲ್ಲಬೇಕಿದೆ. ಕೆಲವರಿಗೆ ಮತ್ತೊಬ್ಬರನ್ನು ಬೈಯುವ ಚಟ ಇರುತ್ತೆ. ಮತ್ತೊಬ್ಬರನ್ನು ತೆಗಳುವುದರಲ್ಲಿ ಖುಷಿ ಸಂತೋಷ್ ಪಡೆದುಕೊಳ್ಳುತ್ತಾರೆ. ಹತಾಶ ಮನೋಭಾವದಿಂದ ಈ ರೀತಿ ಮಾತನಾಡುತ್ತಾರೆ. ಹಗುರವಾಗಿ ಮಾತನಾಡುವ ಹಗುರ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ, ಪ್ರತಿಯೊಬ್ಬರಿಗೆ ಅವರದ್ದೇ ಆದಂತಹ ವಾಕ್ ಸ್ವಾತಂತ್ರ್ಯ ಇರುತ್ತೆ. ಇನ್ನು, 2A ಮೀಸಲಾತಿ ಬಗ್ಗೆ ಕಾನೂನು ತೊಡಕುಗಳು ಇಲ್ಲದೆ ನಮ್ಮ ಜನರಿಗೆ ಮೀಸಲಾತಿ ಕೊಡಿಸುವುದೇ ನಮ್ಮ ಉದ್ದೇಶ ಎಂದು ಜನರಿಗೆ ಶ್ರೀ ವಚನಾನಂದ ಸ್ವಾಮೀಜಿ ಸಂದೇಶ ರವಾನೆ ಮಾಡಿದರು.
ಓದಿ: ಕಾಂಗ್ರೆಸ್ ಪಾದಯಾತ್ರೆ ಉದ್ಘಾಟಿಸುವಂತೆ ವಚನಾನಂದ ಸ್ವಾಮೀಜಿಗೆ ಡಿಕೆಶಿ ಆಹ್ವಾನ