ದಾವಣಗೆರೆ: ಶಿವಮೊಗ್ಗದಲ್ಲಿ ನಿನ್ನೆ ಸಂಭವಿಸಿದ ಭೀಕರ ಸ್ಫೋಟದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅದರ ತೀವ್ರತೆಗೆ ಜನ ಭಯಬಿದ್ದಿದ್ದರು. ದಾವಣಗೆರೆ ಜಿಲ್ಲೆಯ ಗಡಿ ಭಾಗದಲ್ಲಿನ ಎರಡು ಗ್ರಾಮಗಳಿಗೂ ಸ್ಫೋಟದ ಸದ್ದು ಕೇಳಿಸಿದ್ದು, ಗ್ರಾಮಸ್ಥರು ರಾತ್ರಿಯೆಲ್ಲಾ ಭಯದಲ್ಲೇ ಕಾಲ ಕಳೆದಿದ್ದಾರೆ.
ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿ ಬಂದಿದ್ದರಿಂದ ಹಳ್ಳಿ ಜನ ಬೆಚ್ಚಿಬಿದ್ದಿದ್ದಾರೆ. ಜೋಳದಾಳ್ ಹಾಗೂ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಭಯಾನಕ ಶಬ್ದದ ಅನುಭವ ಆಗಿದ್ದು, ಶಬ್ದಕ್ಕೆ ಬೆದರಿದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಶಬ್ದಗಳು ಕೇಳಿ ಬಂದಿರುವುದು ಇದೇ ಮೊದಲಲ್ಲವಂತೆ...!
ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ದಾವಣಗೆರೆ ಜಿಲ್ಲೆಯ ಜೋಳದಾಳ್ ಹಾಗೂ ಚೀಲೂರು ಗ್ರಾಮಗಳು ಗಡಿಯನ್ನು ಹಂಚಿಕೊಂಡಿದ್ದು, ಗಣಿಗಾರಿಕೆ ಕೇಂದ್ರಗಳಿಗೆ ಹತ್ತಿರವಾಗಿವೆ. ಇತಂಹ ಶಬ್ದಗಳು ಆಗಾಗ ಕೇಳುತ್ತಲೇ ಇರುತ್ತವೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಕಲ್ಲು ಕ್ವಾರಿಯ ಮಾಲೀಕ ಸೇರಿ ಮೂವರ ವಿಚಾರಣೆ