ETV Bharat / state

ನನಗೆ ಗೊತ್ತಿಲ್ಲದೇ ನನ್‌ ಹೆಸರು ಘೋಷಣೆ.. ಟಿಕೆಟ್‌ ಸಿಕ್ಕಿದ್ದು ಸರ್‌ಪ್ರೈಸ್‌..- ಸೀನಿಯರ್‌ ಶಾಮನೂರು - ಶಾಮನೂರು ಶಿವಶಂಕರಪ್ಪ

ನನಗೆ ವಯಸ್ಸಾಗಿದೆ ಅಂತಾ ಹೈಕಮಾಂಡ್ ಟಿಕೆಟ್ ಕೊಡೋಲ್ಲ ಅನ್ಕೊಂಡಿದ್ದೆ. ಇದು ಸರ್​ಪ್ರೈಸ್ ಟಿಕೆಟ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ
author img

By

Published : Mar 24, 2019, 6:17 PM IST

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ಗೆ ಟಿಕೆಟ್ ಅಂತಾ ಹೇಳಲಾಗುತ್ತಿತ್ತು. ಆದರೆ, ಈಗ ಹೈಕಮಾಂಡ್ ಮಲ್ಲಿಕಾರ್ಜುನ್ ಬದಲಾಗಿ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡುವ ಈ ಮೂಲಕ ದಾವಣಗೆರೆ ಬಿಜೆಪಿಯ ಹ್ಯಾಟ್ರಿಕ್ ಸಾಧಕ ಸಿದ್ದೇಶ್ವರ್​ಗೆ ಶಾಕ್ ಕೊಡಲು ಮುಂದಾಗಿದೆ.

ಸರ್​ಪ್ರೈಸ್ ಟಿಕೆಟ್ ಎಂದ ಶಾಮನೂರು

ಕಾಂಗ್ರೆಸ್ ಹಿರಿಯ ನಾಯಕ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ

ನನಗೆ ವಯಸ್ಸಾಗಿದೆ ಅಂತಾ ಹೈಕಮಾಂಡ್ ಟಿಕೆಟ್ ಕೊಡೋದಿಲ್ಲ ಅನ್ಕೊಂಡಿದ್ದೆ. ಆದರೆ, ಆಶ್ಚರ್ಯಕರ ರೀತಿಯಲ್ಲಿ ನನಗೆ ಟಿಕೆಟ್ ಸಿಕ್ಕಿದೆ. ಇದು ಸರ್​ಪ್ರೈಸ್ ಟಿಕೆಟ್ ಅಂತಾ ದಾವಣಗೆರೆಯಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಇಷ್ಟು ದಿನ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನ ಬಿಜೆಪಿ ಸಂಸದ ಸಿದ್ದೇಶ್ವರ್ ವಿರುದ್ಧ ಕಣಕ್ಕಿಳಿಸಲಾಗುತ್ತೆ ಎಂಬ ಬಲವಾದ ಮಾತು ಕೇಳಿಬಂದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಆಶ್ಚರ್ಯಕರ ರೀತಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ 87 ವರ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದು ಸ್ವತಃ ಶಾಮನೂರು ಶಿವಶಂಕರಪ್ಪರಿಗೇ ಶಾಖ್ ಆಗಿದ್ದು, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಚುನಾವಣೆಯ ರೂಪುರೇಷೆ ಸಿದ್ಧಪಡಿಸುವುದಾಗಿ ಅವರು ಹೇಳಿದ್ದಾರೆ.

ದಕ್ಷಿಣಕ್ಕೆ ಮಗನ್ನನ್ನು ನಿಲ್ಲಿಸುವ ಪ್ಲಾನ್..?

ಹೈಕಮಾಂಡ್ ನನಗೆ ಟಿಕೆಟ್ ನೀಡಿರೋದು ಖುಷಿಯಾಗಿದೆ. ಮಲ್ಲಿಕಾರ್ಜುನ್​ಗೆ ಟಿಕೆಟ್ ಕೊಡಬಹುದು ಅನ್ಕೊಂಡಿದ್ದೆ. ಆದರೂ ನನಗೆ ಘೋಷಣೆಯಾಗಿರೋದು ಸಂತಸ ತಂದಿದೆ. ಈ ಮೂಲಕ ಲೋಕಸಭೆಗೆ ಸ್ಪರ್ಧೆ ಮಾಡಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮಗನನ್ನು ನಿಲ್ಲಿಸಿ ಗೆಲ್ಲಿಸಿ ಮಂತ್ರಿ ಮಾಡಬೇಕೆಂಬ ಆಸೆ ಶಾಮನೂರು ಶಿವಶಂಕರಪ್ಪನವರಲ್ಲಿದೆ. ಇದರ ಜೊತೆ ಒಂದು ಲಕ್ಷ ಅಂತರದಿಂದ ನಾನು ಗೆಲ್ಲುತ್ತೇನೆ ಎಂದು ಸಿದ್ದೇಶ್ವರ್ ಹೇಳಿದ್ದರು. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಹೇಳುತ್ತಾರೆ. ನಮ್ಮದು ಮೈತ್ರಿ ಕೂಟ ಒಂದೂವರೆ ಲಕ್ಷ ಜೆಡಿಎಸ್ ಓಟಿದ್ದು, ಇಬ್ಬರೂ ಒಟ್ಟಾಗಿ ಚುನಾವಣೆ ಮಾಡಿ ಬಿಜೆಪಿಗೆ ಠಕ್ಕರ್ ನೀಡಲು ಸಿದ್ಧತೆ ಕೂಡ ಮಾಡಿಕೊಂಡಿದೆ.

ಇನ್ನೂ‌ ನಿಗೂಢತೆ, ನಾಳೆ ವರಿಷ್ಠರ ಭೇಟಿ

ತಮ್ಮ ಸ್ಪರ್ಧೆಯ ಬಗ್ಗೆ ಶಾಮನೂರು, ಇನ್ನೂ ನಿಗೂಢತೆ ಕಾಯ್ದು ಕೊಂಡಿದ್ದಾರೆ. ತಮ್ಮ ನಾಮಪತ್ರ ಸಲ್ಲಿಕೆಯ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಪಕ್ಷದ ಅಧ್ಯಕ್ಷರನ್ನು, ವರಿಷ್ಠರನ್ನು‌ ಭೇಟಿ ಮಾಡಿ‌ ಮುಂದಿನ‌ ನಡೆ ಹೇಳುತ್ತೇನೆ ಎಂದು ಶಾಮನೂರು ಹೇಳಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.