ದಾವಣಗೆರೆ : ಬಿಜೆಪಿಯವರು ಎತ್ತು, ಎಮ್ಮೆ, ಹಸು ಸಾಕಿದ್ದಾರಾ? ನಾವು ಕುದುರೆ, ಹಸು ಸಾಕಿದ್ದೇವೆ ಎನ್ನುವ ಮೂಲಕ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ. ಮಾಜಿ ಸಚಿವರ ಒಡೆತನದ ಕಲ್ಲೇಶ್ವರ ಮಿಲ್ (ಫಾರ್ಮ್ ಹೌಸ್)ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣದ ವಿಚಾರಕ್ಕೆ ಹೋರಾಟ ನಡೆಸುತ್ತಿರುವ ಬಿಜೆಪಿ ವರ್ತನೆಗೆ ಶಾಮನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಿಲ್ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು. ಸರ್ಕಾರ ಮೀಸಲಾತಿ ಘೋಷಣೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ನೀಡಿದ್ದು ಅರ್ಥವಾಗಿಲ್ಲ. ಸೂಕ್ತ ಮಾಹಿತಿ ಪಡೆದು ಮಾತಾಡುವೆ ಎಂದರು.
ವನ್ಯಜೀವಿ ಪತ್ತೆ ಹಿನ್ನೆಲೆ : ಡಿಸೆಂಬರ್ 21 ರಂದು ಮಾಜಿ ಸಚಿವರೊಬ್ಬರ ಕಲ್ಲೇಶ್ವರ ಅವರ ರೈಸ್ ಮಿಲ್ನಲ್ಲಿ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡುಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಈ ವಿಚಾರವಾಗಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಬಿಜೆಪಿಯವರು ಎತ್ತು, ಎಮ್ಮೆ, ಹಸು ಸಾಕಿದ್ದಾರಾ? ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಮಾಜಿ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ