ಹರಿಹರ: ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಉಪ ಪ್ರಾಂಶುಪಾಲರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಎಸ್.ಹೆಚ್. ಹೂಗಾರ್ ಇವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಸಿ. ಜಯಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ. ಶ್ರೀನಿವಾಸ್, ಅಧ್ಯಕ್ಷರಾಗಿ ಸಿ. ಜಯಣ್ಣ, ಉಪಾಧ್ಯಕ್ಷರಾಗಿ ಕೆ.ಜಿ. ಬಸವನಗೌಡ್ರು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಸಿದ್ದರಾಮೇಶ್, ಖಜಾಂಚಿಯಾಗಿ ರೇವಣ್ಣ ನಾಯ್ಕ, ಸದಸ್ಯರುಗಳಾಗಿ ಮಹಬೂಬ್ ಭಾಷ, ಕುಬೇಂದ್ರಪ್ಪ, ರೇಣುಕಯ್ಯ, ಶ್ರೀಮತಿ ಸಂಧ್ಯಾರಾಣಿ, ಶ್ರೀಮತಿ ಮಹಬೂಬಿ ಆಯ್ಕೆಯಾಗಿದ್ದಾರೆ.
ಬಳಿಕ ಪದಾಧಿಕಾರಿಗಳು ಮಾತನಾಡಿ ಸಂಘ ನೀಡಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಗೌರವಾನ್ವಿತದಿಂದ ನಡೆಸಿಕೊಂಡು ಹೋಗುತ್ತೇವೆ. ಸಂಘದ ಸದಸ್ಯರ ಬೇಡಿಕೆಗಳು ಹಾಗೂ ಅವರ ಆಗು ಹೋಗುಗಳಿಗೆ ಸ್ಫಂದಿಸುತ್ತೇವೆ. ನಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.