ETV Bharat / state

ಮಾಯಕೊಂಡ ಟಿಕೆಟ್ 'ಕೈ' ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಸವಿತಾ ಬಾಯಿ - ಈಟಿವಿ ಭಾರತ ಕನ್ನಡ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಅವರಿಗೆ ಟಿಕೆಟ್​ ಕೈ ತಪ್ಪಿದ್ದು ಕಣ್ಣೀರು ಹಾಕಿದರು.

ಮಹಿಳಾ ಆಕಾಂಕ್ಷಿ ಸವಿತಾ ಬಾಯಿ
ಮಹಿಳಾ ಆಕಾಂಕ್ಷಿ ಸವಿತಾ ಬಾಯಿ
author img

By

Published : Mar 29, 2023, 12:27 PM IST

Updated : Mar 31, 2023, 6:31 PM IST

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೆ.ಎಸ್.ಬಸವರಾಜ್ (ಬಸವಂತಪ್ಪ) ಅವರ ಪಾಲಾದ ಬೆನ್ನಲ್ಲೇ ಮಹಿಳಾ ಆಕಾಂಕ್ಷಿ ಸವಿತಾ ಮಲ್ಲೇಶ್ ನಾಯಕ್ ಕಣ್ಣೀರು ಸುರಿಸಿದರು. "ನನಗೆ ಟಿಕೆಟ್ ತಪ್ಪಲು ಎಡಿಟ್ ಆದ ಫೋಟೋಗಳೇ ಕಾರಣ. ಎಐಸಿಸಿ, ಕೆಪಿಸಿಸಿಗೆ ಎಡಿಟೆಡ್ ಫೋಟೋ ತೋರಿಸಿ ಟಿಕೆಟ್ ತಪ್ಪಿಸಲಾಗಿದೆ" ಎಂದು ಅವರು ದೂರಿದರು. ಮಹಿಳೆಗೆ ಅಪಮಾನ, ಚಾರಿತ್ರ್ಯವಧೆ, ತೇಜೋವಧೆ ಮಾಡಲಾಗಿದ್ದು, ಟಿಕೆಟ್​ಗಾಗಿ ಇಂಥ ಕೃತ್ಯ ನಡೆಸಿದ್ದು ಸರಿಯೇ ಎಂದು ಸ್ವಪಕ್ಷೀಯ ಮುಖಂಡರನ್ನು ಪ್ರಶ್ನಿಸಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡಿದ್ದೇನೆ‌: "ನನಗೆ ಈ ಬೆಳವಣಿಗೆ ಆಘಾತ, ನೋವು ತಂದಿದೆ. ಮೂರು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದೇನೆ‌. ಕಾರ್ಯಕರ್ತರು, ಅಭಿಮಾನಿಗಳು ನೊಂದಿದ್ದಾರೆ. ಮಹಿಳೆಯರಿಗೆ ನ್ಯಾಯ ಇಲ್ಲ, ಹೆಣ್ಣಾಗಿ ಹೊರಗೆ ಬರಬಾರದು. ಬಂದರೆ ಇಂಥ ಆರೋಪಗಳನ್ನು ಸಹಿಸಿಕೊಳ್ಳಬೇಕು. ರಾಜಕಾರಣದಲ್ಲಿ ಬೆಳೆಯುವುದು ಸುಲಭ ಅಲ್ಲ. ನನಗೆ ತುಂಬಾನೇ ಮೋಸ ಆಗಿದೆ. ಮೋಸ ಮಾಡಿ ಟಿಕೆಟ್ ಪಡೆದರೆ ಗೆಲ್ಲುತ್ತೇವೆ ಎಂಬುದು ಭ್ರಮೆ. ಜನರು ಇವರಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ" ಎಂದು ಸವಿತಾ ಬಾಯಿ ಮಲ್ಲೇಶ್ ನಾಯಕ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೈತಪ್ಪಿದ ಟಿಕೆಟ್​.. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್ ರಾಜೀನಾಮೆ, ಹಲವರಲ್ಲಿ ಅಸಮಾಧಾನ

ಪತಿಯಿಂದ ದೂರು ದಾಖಲು: ಇತ್ತೀಚೆಗೆ ಫೋಟೋಗಳು ವೈರಲ್​ ಆಗಿರುವ ಸಂಬಂಧ ಸವಿತಾ ಬಾಯಿ ಅವರ ಪತಿ ಮಲ್ಲೇಶ್ ನಾಯಕ್ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ: ಕುರುಬರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ: ಸಿದ್ಧರಾಮಾನಂದಪುರ ಸ್ವಾಮೀಜಿ

Last Updated : Mar 31, 2023, 6:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.