ETV Bharat / state

ಆ ಕಾಲ ಬರಲಿ ಆ ಮೇಲೆ ನೋಡೋಣ.. ಸಚಿವ ರಮೇಶ್‌ಗೆ ಸೋದರ ಸತೀಶ್‌ ಜಾರಕಿಹೊಳಿ ಟಾಂಗ್ - ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಸಚಿವ ರಮೇಶ್ ಜಾರಕಿಹೊಳಿ ಅವರು ಐವರು ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಕರೆತರುತ್ತೇನೆ ಎಂಬ ಹೇಳಿಕೆಗೆ ಸೋದರ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

Satish Jarkiholi
ಸತೀಶ್ ಜಾರಕಿಹೊಳಿ
author img

By

Published : Jun 15, 2020, 5:32 PM IST

ದಾವಣಗೆರೆ : ಕಾಂಗ್ರೆಸ್​ನ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ಸಚಿವ ರಮೇಶ್ ಜಾರಕಿಹೊಳಿ ಐವರು ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಕರೆತರುತ್ತೇನೆ ಎಂದಿದ್ದಾರೆ. ಆ ಕಾಲ ಬರಲಿ ನೋಡೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಮಾಜಿ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಅಲ್ಲೇ ರಷ್ ಇದೆ. ಈಗಲೇ ಮೂರು ಗುಂಪುಗಳಿವೆ. ಬೇರೆಯವರು ಹೋದರೆ ನಾಲ್ಕನೇ ಗುಂಪು ಆಗಲಿದೆ ಎಂದು ವ್ಯಂಗ್ಯವಾಡಿದರು.

ಜುಲೈ 2ನೇ ತಾರೀಖಿನಂದು ಡಿ ಕೆ ಶಿವಕುಮಾರ್ ಪದಗ್ರಹಣ ಸಮಾರಂಭ ಫಿಕ್ಸ್ ಆಗಲಿದೆ ಎಂದ ಅವರು, ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಇದೆ. ಇದೆಲ್ಲಾ ಮಾಮೂಲಿ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.