ದಾವಣಗೆರೆ: ನ್ಯಾಮತಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದಾಗಿ ಜನರು ಆತಂಕಗೊಂಡಿದ್ದು, ಸ್ವಯಂಪ್ರೇರಿತರಾಗಿ ಹೊರಗಿನವರು ತಮ್ಮ ಪ್ರದೇಶಗಳಿಗೆ ಬಾರದಂತೆ ಪ್ರವೇಶ ನಿರ್ಬಂಧ ಹಾಕಿದ್ದಾರೆ.
ಇನ್ನು ಕಂಟೈನ್ಮೆಂಟ್ ವಲಯದಲ್ಲಿರುವ 29 ಕುಟುಂಬಗಳಿಗೆ ಆಹಾರದ ಪೊಟ್ಟಣ ಹಾಗೂ ಮಾಸ್ಕ್ಗಳನ್ನು ನೀಡಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಇಂತಹ ವಲಯಗಳಿಂದ ಹೊರಗಡೆ ಬರಬೇಡಿ. ನಾಲ್ಕೈದು ದಿನಗಳಾದರೂ ಇಲ್ಲಿಯೇ ಇರಬೇಕು. ನಿಮಗೆ ಆಹಾರ ಪೊಟ್ಟಣಗಳ ವ್ಯವಸ್ಥೆ ಮಾಡಲಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.