ದಾವಣಗೆರೆ: ರಾಜಕೀಯವಾಗಿ ಬೆಳೆಯುತ್ತಿದ್ದ ಚಂದ್ರು ಸಾವಿಗೀಡಾಗಿರುವ ದುರಂತ ಕೇಳಿ ಬಹಳ ದು:ಖವಾಯಿತು ಎಂದು ಸಂಸದ ಬಿವೈ ರಾಘವೇಂದ್ರ ಕಳವಳ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ಅವರು, ನದಿಯಲ್ಲಿ ಮುಳುಗಿ ಮೃತ ಚಂದ್ರಶೇಖರ್ ಪಾರ್ಥಿವ ಶರೀರದ ದರ್ಶನ ಪಡೆಯುವ ವೇಳೆ ಮಾತನಾಡಿದರು.
ಒಳ್ಳೆಯವನಾಗಿದ್ದ ಚಂದ್ರು: ಚಂದ್ರು ಬಹಳ ಒಳ್ಳೆಯ ಹುಡುಗ, ಕಳೆದ ಐದಾರು ದಿನಗಳಿಂದ ನಾಪತ್ತೆಯಾಗಿದ್ದ, ಇದೀಗ ಅವನು ಸಾವಿಗೀಡಾಗಿರುವ ದಾರುಣ ಸುದ್ದಿ ಕೇಳಿ ಬೇಸರ ಆಗಿದೆ. ಚಂದ್ರು ರಾಜಕೀಯವಾಗಿ ಕಾರ್ಯಕರ್ತರು ಮಧ್ಯೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದರು. ಆದರೆ, ಈ ರೀತಿ ಸಾವಿಗೀಡಾಗಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದ್ದು, ಸಾಕಷ್ಟು ಬೇಸರ ತರುತ್ತೇ, ತನಿಖೆ ನಡೆಸಲು ಪೊಲೀಸರಿದ್ದಾರೆ ಕಾದು ನೋಡೋಣ ಎಂದರು.
ತನಿಖೆ ಬಳಿಕ ಸತ್ಯಾಸತ್ಯ ಹೊರಕ್ಕೆ : ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗಿ ಬಂದಿದ್ದೇನೆ. ಪೊಲೀಸರು ತನಿಖೆ ನಡೆಸಿದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ. ಇನ್ನು ರಾಜಕೀಯ ವೈಷಮ್ಯವೂ ಇಲ್ಲ, ಏನೋ ನೋಡೊಣ ಪೊಲೀಸರ ತನಿಖೆ ಬಳಿಕ ತಿಳಿದು ಬರಲಿದೆ. ಇನ್ನು ಅವರ ಕುಟುಂಬಸ್ಥರಿಗೆ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಆ ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದರು.
ಇದನ್ನೂ ಓದಿ:ಚಂದ್ರಶೇಖರ್ ನಾಪತ್ತೆ ಪ್ರಕರಣ: ದ್ವೇಷ, ಹಣಕಾಸು ವಿಚಾರವಾಗಿ ಅಪಹರಣವಾಗಿರುವ ಶಂಕೆ