ETV Bharat / state

ಆತ್ಮಹತ್ಯೆಗೆ ಶರಣಾಗಿದ್ದ ದಿನಗೂಲಿ ನೌಕರನ ಮನೆಗೆ ರೇಣುಕಾಚಾರ್ಯ ಭೇಟಿ

ಅರಣ್ಯ ಇಲಾಖೆಯ ದಿನಗೂಲಿ ನೌಕರ ಕೆಲಸದಿಂದ ವಜಾಗೊಳ್ಳುತ್ತಿದ್ದಂತೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಎಂ.ಪಿ ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡಿ ವೈಯಕ್ತಿಕ ಧನಸಹಾಯ ನೀಡಿದ್ದಲ್ಲದೇ, ಸಾಂತ್ವನ ಹೇಳಿದ್ದಾರೆ. ಜೊತೆಗೆ ಮೃತನ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

Renukacharya visits the home of a forest department employee who committed suicide
ಆತ್ಮಹತ್ಯೆಗೆ ಶರಣಾಗಿದ್ದ ಅರಣ್ಯ ಇಲಾಖೆ ದಿನಗೂಲಿ ನೌಕರನ ಮನೆಗೆ ರೇಣುಕಾಚಾರ್ಯ ಭೇಟಿ
author img

By

Published : May 25, 2020, 9:05 PM IST

ದಾವಣಗೆರೆ: ಕೆಲಸದಿಂದ ವಜಾಗೊಳಿಸಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದ ಅರಣ್ಯ ಇಲಾಖೆಯ ದಿನಗೂಲಿ ನೌಕರನ ಮನೆಗೆ ಶಾಸಕ ಎಂ.ಪಿ.‌ರೇಣುಕಾಚಾರ್ಯ ಭೇಟಿ ನೀಡಿದರು.

ಕಳೆದ 22 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ವಾಚರ್ ಆಗಿ ಸುರೇಶ್ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕೆಲಸದಿಂದ ವಜಾಗೊಳಿಸಿದ್ದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಆತ್ಮಹತ್ಯೆಗೆ ಶರಣಾಗಿದ್ದ ಅರಣ್ಯ ಇಲಾಖೆ ದಿನಗೂಲಿ ನೌಕರನ ಮನೆಗೆ ರೇಣುಕಾಚಾರ್ಯ ಭೇಟಿ

ವಿಷಯ ತಿಳಿದು ಸುರೇಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ರೇಣುಕಾಚಾರ್ಯ, ವೈಯಕ್ತಿಕವಾಗಿ 10 ಸಾವಿರ ರೂಪಾಯಿ ನೀಡಿದರು. ಮೃತ ಸುರೇಶ್​​ರ ಮಗನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

ಕ್ವಾರಂಟೈನ್​ನಲ್ಲಿದ್ದವರಿಗೆ ಕಿಟ್ ವಿತರಣೆ: ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮಕ್ಕೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.

ಅಲ್ಲದೇ ಅವರ ಬೀದಿಯನ್ನು ಸೀಲ್​​ಡೌನ್ ಮಾಡಲಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಲ್ಲಿನ ಕುಟುಂಬಗಳಿಗೆ ವೈಯಕ್ತಿಕವಾಗಿ ಫುಡ್ ಕಿಟ್ ಹಾಗೂ ತರಕಾರಿಯನ್ನು ರೇಣುಕಾಚಾರ್ಯ ವಿತರಣೆ ಮಾಡಿದರು. ಇದಕ್ಕೂ ಮೊದಲು ಆಹಾರ ಕಿಟ್ ವಿತರಿಸಿದ್ದ ಶಾಸಕರು 2ನೇ ಬಾರಿಯೂ ವಿತರಿಸಿ, ಜನರಲ್ಲಿ ಆತ್ಮಸ್ಥೈರ್ಯ ತುಂಬಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.