ದಾವಣಗೆರೆ : "ನೀವ್ ಬರೀ ಫೇಸ್ಬುಕ್ ಲೈವ್ನಲ್ಲಿ ಬರ್ತೀರಾ, ನಮ್ಮೂರಿಗೆ ಬಂದೇ ಇಲ್ಲ' ಎಂದು ಮದುವೆಗೆ ಬಂದ ಶಾಸಕ ಎಂ. ಪಿ. ರೇಣುಕಾಚಾರ್ಯರನ್ನು ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದಕ್ಕೆ ರೇಣುಕಾಚಾರ್ಯ ಕೂಡ ಏಯ್ ನಿಮ್ಮೂರಿಗೆ ಬಂದಿದ್ದೇನೆ. ಕೊರೊನಾ ಬಗ್ಗೆ ಮನೆ ಮನೆಗೆ ಬಂದು ಜಾಗೃತಿ ಮೂಡಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಎಲ್ಲರೂ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಬೀಳುತ್ತೆ ಎಂದು ಶಾಸಕರು ಎಚ್ಚರಿಸಿದರು. ಇದಕ್ಕೆ ಕೊರೊನಾ ಬಂದ ಮೇಲೆ ಎಲ್ಲೂ ಹೋಗಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಂತೆ, ನಾನು ಊರಿನ ತುಂಬಾ ಓಡಾಡಿದ್ದೇನೆ, ಜಾಗೃತಿ ಮುಖ್ಯ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.
ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಅರುಣ್ ಕುಮಾರ್ ಹಾಗೂ ವಿನುತಾರ ಸರಳ ವಿವಾಹ ನೆರವೇರಿತು. ನವಜೋಡಿಗೆ ರೇಣುಕಾಚಾರ್ಯ ಮಾಸ್ಕ್ ವಿತರಿಸಿ ಶುಭ ಹಾರೈಸಿದರು.