ETV Bharat / state

ನೀವು ಸತ್ರೇ ನಾನೂ ನಿಮ್‌ ಜತೆ ಸಾಯಲು ಸಿದ್ಧ.. ಸೋಂಕಿತರಿಗೆ ಎಂ ಪಿ ರೇಣುಕಾಚಾರ್ಯ ಧೈರ್ಯ - ದಾವಣಗೆರೆ ಸುದ್ದಿ

ಸರ್ಕಾರದ ಮೂರು ಲಕ್ಷ ರೂಪಾಯಿಯನ್ನು ಒಬ್ಬ ರೋಗಿಯಿಂದ ಪಡೆಯುತ್ತಿದೆ ಎಂಬುದು ಸುಳ್ಳು. ಅನ್ನ ಮುಟ್ಟಿ ಹೇಳುತ್ತಿದ್ದೇನೆ. ಈ ರೀತಿ ಏನೂ ಇಲ್ಲ. ಹೋಂ ಐಸೋಲೇಷನ್ ಇದ್ದರೂ ಸೋಂಕಿತರು ಮನೆಯಿಂದ ಹೊರ ಬರುತ್ತಿದ್ದಾರೆ. ಹತ್ತು ದಿನದೊಳಗೆ ಮತ್ತೆ ಸೋಂಕು ಬರುವ ಸಾಧ್ಯತೆ ಇರುವ ಕಾರಣ ಇಲ್ಲೇ ಇರಬೇಕು..

renukacharya visit to covid center in davangere
"ನಾನು ನಿಮ್ಮ ಜೊತೆ ಸಾಯಲು ಸಿದ್ಧ'': ರೇಣುಕಾಚಾರ್ಯ
author img

By

Published : Sep 13, 2020, 7:09 PM IST

ದಾವಣಗೆರೆ : 'ನನಗೆ ನಿಮ್ಮ ಯೋಗಕ್ಷೇಮವೇ ಮುಖ್ಯ. ನಾನು ಸಹ ನಿಮ್ಮ ಜೊತೆ ಸಾಯಲು ಸಿದ್ಧ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದರು.

ಕೊರೊನಾ ರೋಗಿಗಳಿಗೆ ಧೈರ್ಯ ತುಂಬಿದ ಎಂ ಪಿ ರೇಣುಕಾಚಾರ್ಯ

ಹೊನ್ನಾಳಿ ಪಟ್ಟಣದ ಕೋವಿಡ್ ಕೇರ್ ಸೆಂಟರ್​​​ಗೆ ದಿಢೀರ್ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಏನೇ ಸಮಸ್ಯೆ ಇದ್ರೇ ಹೇಳಿ. ನಾನು ಸರಿಪಡಿಸುತ್ತೇನೆ. ವಾರಕ್ಕೊಮ್ಮೆ ಇಲ್ಲಿಗೆ ಬಂದು ನಾನು ಪರೀಕ್ಷೆ ನಡೆಸುತ್ತಿದ್ದೇನೆ ಎಂದು ಹೇಳಿದರು.

ಸರ್ಕಾರದ ಮೂರು ಲಕ್ಷ ರೂಪಾಯಿಯನ್ನು ಒಬ್ಬ ರೋಗಿಯಿಂದ ಪಡೆಯುತ್ತಿದೆ ಎಂಬುದು ಸುಳ್ಳು. ಅನ್ನ ಮುಟ್ಟಿ ಹೇಳುತ್ತಿದ್ದೇನೆ. ಈ ರೀತಿ ಏನೂ ಇಲ್ಲ. ಹೋಂ ಐಸೋಲೇಷನ್ ಇದ್ದರೂ ಸೋಂಕಿತರು ಮನೆಯಿಂದ ಹೊರ ಬರುತ್ತಿದ್ದಾರೆ. ಹತ್ತು ದಿನದೊಳಗೆ ಮತ್ತೆ ಸೋಂಕು ಬರುವ ಸಾಧ್ಯತೆ ಇರುವ ಕಾರಣ ಇಲ್ಲೇ ಇರಬೇಕು ಎಂದು ಕಿವಿಮಾತು ಹೇಳಿದರು.

ಸೋಂಕಿತರ ಜೊತೆಗೆ ಊಟ : ಕೋವಿಡ್​​​ ಸೆಂಟರ್​​ಗೆ ಭೇಟಿ ನೀಡಿದ ರೇಣುಕಾಚಾರ್ಯ ಅಡುಗೆ ಮನೆಯಲ್ಲಿ ಊಟದ ಸಿದ್ಧತೆ ಬಗ್ಗೆ ಪರಿಶೀಲಿಸಿದರು‌.‌ ಬಳಿಕ ಸೋಂಕಿತರ ಜೊತೆ ಊಟ ಮಾಡಿದರು.‌ ಈ ವೇಳೆ ಸೋಂಕಿತರು ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.