ದಾವಣಗೆರೆ: ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಶ್ರೀರಾಮಮಂದಿರವನ್ನು ಕಟ್ಟಿಸಿಕೊಡಲು ಅಂಬಾನಿ, ಅದಾನಿ, ಟಾಟಾ ಬಿರ್ಲಾರಂಥ ಶ್ರೀಮಂತರು ಸಿದ್ಧರಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದರು.
ದಾವಣಗೆರೆಯ ಹೊನ್ನಾಳಿ ತಾಲೂಕಿನ ತ್ಯಾಗದ ಕಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ಮಾರಕ ಶ್ರೀರಾಮಮಂದಿರವನ್ನು ಯಾರೋ ಒಬ್ಬ ವ್ಯಕ್ತಿಯಿಂದ ನಿರ್ಮಾಣ ಆಗಕೂಡದು ಎಂಬ ಅಪೇಕ್ಷೆ ಸಂಘ ಪರಿವಾರದ್ದಾಗಿದೆ. ದೇಶದ ಜನ ಇದಕ್ಕೆ ಹಣ ನೀಡ್ಬೇಕು, ಹಾಗೂ ಈ ವಿಚಾರವನ್ನು ಪ್ರತಿಯೊಂದು ಮನೆಗೆ ತಿಳಿಸಬೇಕಾಗಿದೆ ಎಂದರು.
ಅಯೋಧ್ಯೆ ಪ್ರಕರಣ ತೊಡಕಾಗಿತ್ತು, ಇದನ್ನು ನಾವು ಕಾನೂನಾತ್ಮಕವಾಗಿ ಬಗೆಹರಿಸಿದ್ದೇವೆ. ಕೆಲವರು ಎರಡು ಕೋಮಿನ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವ ವೇಳೆ ಪ್ರಧಾನಿ ಮೋದಿಯವರು ಪ್ರಧಾನಿಯಾಗಿ ಇದನ್ನು ಬಗೆಹರಿಸಿದರು. ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಮಾಡಿ ಅಲ್ಪಸಂಖ್ಯಾತರಿಗೆ ಐದು ಎಕರೆ ಜಾಗವನ್ನು ನೀಡಿ ಮಸೀದಿ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿತು. ಇದೀಗ ಭವ್ಯ ಮಂದಿರ ನಿರ್ಮಾಣ ಮಾಡಲು ದೇಣಿಗೆ ಸಂಗ್ರಹ ಆಗುತ್ತಿದೆ ಎಂದರು.
ಇದನ್ನೂ ಓದಿ: ಶಾಮನೂರು ಕಾರ್ಖಾನೆಯಿಂದ ಹಾರುವ ಬೂದಿ; ಬೇಸತ್ತು ವಿಷ ಸೇವಿಸಲು ರೈತನ ಯತ್ನ