ETV Bharat / state

ಕಾಂಗ್ರೆಸ್​​ನವರದ್ದು ಭಾರತ್ ಜೋಡೊ ಅಲ್ಲ ಭಾರತ್​ ತೋಡೊ ಯಾತ್ರೆ : ರೇಣುಕಾಚಾರ್ಯ ವ್ಯಂಗ್ಯ - congress bharat jodo yathra

ಕಾಂಗ್ರೆಸ್​ನವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೊ ಪಾದಯಾತ್ರೆ ಮಾಡುತ್ತಿದ್ದಾರೆ.ಇವರು ಕಾಶ್ಮೀರ ತಲುಪುವುದರೊಳಗಾಗಿ ಜನರು ಗೋ ಬ್ಯಾಕ್ ಎಂದು ಓಡಿಸುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ವ್ಯಂಗ್ಯ ಮಾಡಿದ್ದಾರೆ.

renukacharya-spoke-against-bharat-jodo-yathra
ಕಾಂಗ್ರೆಸ್​​ನವರದ್ದು ಭಾರತ್ ಜೋಡೊ ಅಲ್ಲ ಭಾರತ್​ ತೋಡೊ ಯಾತ್ರೆ : ರೇಣುಕಾಚಾರ್ಯ ವ್ಯಂಗ್ಯ
author img

By

Published : Oct 1, 2022, 8:12 PM IST

ದಾವಣಗೆರೆ : ಕಾಂಗ್ರೆಸ್​ನವರದ್ದು ಭಾರತ್ ಜೋಡೋ ಯಾತ್ರೆ ಅಲ್ಲ. ಭಾರತ್ ತೋಡೋ ಯಾತ್ರೆ ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಶಾಸಕ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಒಂದು ದೈತ್ಯ ಬಂಡೆ. ಅ ಬಂಡೆಯ ವಿರುದ್ದ ಹೋಗ್ತಾರಲ್ಲ ಇದು ಚೈಲ್ಡಿಶ್, ರಾಹುಲ್ ಗಾಂಧಿ ಫನ್ನಿಬಾಯ್ ಎಂದು ಎಂಪಿ ರೇಣುಕಾಚಾರ್ಯ ವ್ಯಂಗ್ಯ ಮಾಡಿದರು. ಇವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ. ಇವರು ಕಾಶ್ಮೀರ ತಲುಪುವುದರೊಳಗಾಗಿ ಜನರು ಗೋ ಬ್ಯಾಕ್ ಎಂದು ಜನ ಓಡಿಸುತ್ತಾರೆ. ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ದತೆ ಇಲ್ಲ, ದೇಶವನ್ನು ವೋಟಿಗಾಗಿ ಸ್ವಾರ್ಥಕ್ಕಾಗಿ ಛಿದ್ರ ಮಾಡಿದವರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್​​ನವರದ್ದು ಭಾರತ್ ಜೋಡೊ ಅಲ್ಲ ಭಾರತ್​ ತೋಡೊ ಯಾತ್ರೆ : ರೇಣುಕಾಚಾರ್ಯ ವ್ಯಂಗ್ಯ

ಕಾಂಗ್ರೆಸ್​ನ ಅಧ್ಯಕ್ಷರಾಗಲು ಯಾರೂ ಸಿದ್ಧರಿಲ್ಲ :ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಸಿದ್ದರಿಲ್ಲ‌, ರಾಹುಲ್ ಗಾಂಧಿ ಅಧ್ಯಕ್ಷರಾದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿಯವರು ಇದ್ದ ಕಾಂಗ್ರೆಸ್ ಅದು. ಈಗ ನಕಲಿಗಳ ಕೈಯಲ್ಲಿದೆ. ಭಾರತ್ ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದೆ. ಅದಕ್ಕೆ ದಿನಕ್ಕೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಸಿದ್ದರಾಮೋತ್ಸವದಲ್ಲಿ ಡಿಕೆಶಿ ಸಿದ್ದರಾಮಯ್ಯ ದೂರ: ಸಿದ್ದರಾಮೋತ್ಸವದಲ್ಲಿ ಡಿಕೆಶಿ ಸಿದ್ದರಾಮಯ್ಯ ಬಲವಂತದ ಅಪ್ಪುಗೆ ಮಾಡಿದರು. ಬೆಂಗಳೂರಿಗೆ ಹೋದ ನಂತರ ನಾನೊಂದು ತೀರ ನೀನೊಂದು ತೀರ ಎಂಬಂತೆ ಆಗಿದ್ದಾರೆ. ಅಲ್ಲದೇ ಇವರ ಭಾರತ್ ಜೋಡೋ ಯಾತ್ರೆಗೆ ಜನರು ಬರ್ತಾ ಇಲ್ಲ ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ. ಜೊತೆಗೆ ಗೋ ಬ್ಯಾಕ್ ರಾಹುಲ್ ಗಾಂಧಿ ಎಂದು ಹೇಳುತ್ತಿದ್ದಾರೆ. ಆದ್ದರಿಂದ 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸೂರ್ಯ ಚಂದ್ರರೂ ಇರುವುದು ಎಷ್ಟು ಸತ್ಯವೋ ನಾವು ಅಧಿಕಾರಿಕ್ಕೆ ಬರುವುದು ಅಷ್ಟೇ ಸತ್ಯ ಎಂದರು.

ಇನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಮುಂದೆ ಬರುತ್ತಿಲ್ಲ. ಅದ್ದರಿಂದ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಖರ್ಗೆಯವರ ಮೇಲೆ ಅಪಾರವಾಗ ಗೌರವ ಇದೆ. ಈ ವಿಚಾರದಲ್ಲಿ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದರು.

ಡಿಕೆಶಿ ಕಣ್ಣೀನಲ್ಲಿ ನೀರು ಬರುತ್ತದೆ ಎಂದರೆ ಅಯ್ಯೋ ಪಾಪ : ಡಿಕೆಶಿ ಕಣ್ಣೀನಲ್ಲಿ ಕಣ್ಣೀರು ಬರುತ್ತದೆ ಎಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ ಎಂದು ವ್ಯಂಗ್ಯವಾಗಡಿದರು. ಇನ್ನು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ದಿ.ಮಹಾದೇವ ಪ್ರಸಾದ್ ಅವರ ಪತ್ನಿ ಸ್ಪರ್ಧೆ ಮಾಡಿದಾಗ ಅವರಿಗೆ ಕಣ್ಣೀರು ಹಾಕು ಅನುಕಂಪ ಬರುತ್ತದೆ ಎಂದು ಪಕ್ಕದಲ್ಲಿ ಕುಳಿತು ಡಿಕೆಶಿ ಒತ್ತಾಯಿಸಿದ್ದರು. ಅಂದು ಇದೇ ಡಿಕೆಶಿ ಆ ಹೆಣ್ಣು ಮಗಳಿಗೆ ಕಣ್ಣೀರು ಹಾಕಿಸಿದರು. ಡಿಕೆಶಿ ಮೊಸಳೆ ಕಣ್ಣೀರು ಹಾಕಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ :ಸಾಗುವಳಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ನಡೆಸಿದ್ದಲ್ಲಿ ಜಮೀನು ಸರ್ಕಾರದ ವಶಕ್ಕೆ : ಮೋಹನಕುಮಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.