ETV Bharat / state

ಲಕ್ಷ್ಮಣ ಸವದಿ ಪಕ್ಷದ್ರೋಹಿ: ಎಂ.ಪಿ.ರೇಣುಕಾಚಾರ್ಯ - ETV Bharat kannada News

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಎಂ.ಪಿ.ರೇಣುಕಾಚಾರ್ಯ ಆಕ್ರೋಶಗೊಂಡಿದ್ದಾರೆ.

MLA MP Renukacharya
ಶಾಸಕ ಎಂ.ಪಿ ರೇಣುಕಾಚಾರ್ಯ
author img

By

Published : Apr 14, 2023, 10:47 PM IST

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೊಂಡಿದಕ್ಕೆ ಎಂ.ಪಿ ರೇಣುಕಾಚಾರ್ಯ ಆಕ್ರೋಶ.

ದಾವಣಗೆರೆ : ಲಕ್ಷ್ಮಣ ಸವದಿ ಓರ್ವ ಪಕ್ಷ ದ್ರೋಹಿ. ಬೆನ್ನಿಗೆ ಚಾಕು ಹಾಕಿದ ವಿಶ್ವಾಸದ್ರೋಹಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೆಲವು ಷರತ್ತುಗಳನ್ನಿಟ್ಟು ಸವದಿ ಸೇರ್ಪಡೆಯಾಗಿದ್ದಾರೆ. ಐದಾರು ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾತು ಕೊಟ್ಟು ಪಕ್ಷ ಸೇರಿದ್ದಾರೆ ಎಂದರು.

ಇದನ್ನೂ ಓದಿ : ಸೋತಿದ್ದ ಸವದಿಯನ್ನು ಅಟ್ಟಕ್ಕೇರಿಸಿ ಕಡೆಗಣಿಸಿದ ಹೈಕಮಾಂಡ್: ಟಿಕೆಟ್ ಸಿಗದೆ 'ಕೈ' ಸೇರಿದ ಸವದಿ

"ರೀ ಲಕ್ಷ್ಮಣ ಸವದಿಯವರೇ ನಾವು ನೀವೂ ಒಂದೇ ಪಕ್ಷದಲ್ಲಿದ್ದವರು. ಬಿಜೆಪಿ ನಿಮಗೆ ಸ್ಥಾನಮಾನ, ಗೌರವ ಕೊಡ್ತು. ನೀವು ಅಥಣಿ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ಕಣ್ಣೀರು ಹಾಕುತ್ತಿದ್ದೀರಿ. ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ನಿಮಗೆ ಡಿಸಿಎಂ ಮಾಡಿ ಜೊತೆಗೆ ರಸ್ತೆ ಸಾರಿಗೆ ಇಲಾಖೆ ಖಾತೆಯನ್ನೂ ನೀಡಿ ಮಂತ್ರಿ ಮಾಡಿದರು. ಇಷ್ಟೆಲ್ಲಾ ಸ್ಥಾನಮಾನ ನೀಡಿದರೂ ಕೂಡ ನೀವು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದೀರಿ. ನೀವು ಪಕ್ಷ ದ್ರೋಹಿ, ವಿಶ್ವಾಸ ದ್ರೋಹಿ ಎಂದರು. ನೀವು ಅಥಣಿಯಲ್ಲಿ ಹೀನಾಯವಾಗಿ ಸೋಲುತ್ತೀರಿ, ಅಲ್ಲಿನ ಜನರೇ ನಿಮನ್ನು ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸೋತವರನ್ನು ಡಿಸಿಎಂ ಮಾಡಿದ್ದಾರೆ ಎಂದು ಇದೇ ಕಾಂಗ್ರೆಸ್ ನಾಯಕರಾದ ಡಿಕೆಶಿ​ ಮತ್ತು ಸಿದ್ದರಾಮಯ್ಯ ಟೀಕೆ ಮಾಡಿದ್ದರು. ಇದೀಗ ಸೋತು ಡಿಸಿಎಂ ಆಗಿದ್ದ ಅದೇ ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಯಾವ ಪುರುಷಾರ್ಥಕ್ಕೆ ಸೇರಿಸಿಕೊಳ್ಳಲು ಹೊರಟಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್​ ಕೊಟ್ಟರು. ಲಕ್ಷ್ಮಣ ಸವದಿಯವರೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ಹಗಲ ಕನಸು ಕಾಣಬೇಡಿ. ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ನೀವು ಕಾಂಗ್ರೆಸ್ ನಾಯಕರಿಗೆ ಹಾಕಿರುವ ಷರತ್ತುಗಳು ಈಡೇರಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಕಮಲ ತೊರೆದು ಕೈ ಹಿಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.