ETV Bharat / state

ಡಿಕೆಶಿಯವರೇ ನಿಮಗೆ ತಾಕತ್ ಇದ್ದರೇ ಬಜರಂಗದಳ ನಿಷೇಧಿಸಿ: ರೇಣುಕಾಚಾರ್ಯ ಸವಾಲ್​​ - election news

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಸುಳ್ಳು ಭರವಸೆಯ ನೀಡಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮಾಲೋಕದಲ್ಲಿ ಇದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಟೀಕಿಸಿದ್ದಾರೆ.

renukacharya-challenges-to-dk-shivakumar-to-ban-bajarangdal
ಡಿಕೆಶಿಯವರೇ ನಿಮಗೆ ತಾಖತ್ ಇದ್ದರೇ ಬಜರಂಗದಳ ನಿಷೇಧಿಸಿ: ರೇಣುಕಾಚಾರ್ಯ ಸವಾಲ್​​
author img

By

Published : May 3, 2023, 7:09 PM IST

ಡಿಕೆಶಿಯವರೇ ನಿಮಗೆ ತಾಕತ್ ಇದ್ದರೇ ಬಜರಂಗದಳ ನಿಷೇಧಿಸಿ: ರೇಣುಕಾಚಾರ್ಯ ಸವಾಲ್​​

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರೇ ನಿಮಗೆ ತಾಕತ್ ಇದ್ದರೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳನ್ನು ನಿಷೇಧ ಮಾಡಿ, ನಾವು ಪಿಎಫ್ಐ ಎಸ್​​ಡಿಪಿಐ ನಂತಹ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಾ ಹಾಕುತ್ತೇವೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೆಂಗಲಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂಘಟನೆಗಳನ್ನು ಮುಟ್ಟಲು ಸಾಧ್ಯವಿಲ್ಲ, ನಾವು ಅಧಿಕಾರಕ್ಕೆ ಬಂದರೇ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಾ ಹಾಕುವುದೇ ನಮ್ಮ ಗುರಿ, ಇದು ಹಿಂದೂ ದೇಶ, ಪಾಕಿಸ್ತಾನಕ್ಕೆ ಹೋಗಿ ನಾವು ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗದಳ ಸಂಘಟಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದರೆ ಹಿಂದೂ ಪರ ಸಂಘಟನೆಗಳು ಇರಲೇಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಸುಳ್ಳು ಭರವಸೆಯ ನೀಡಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಇಡೀ ಭಾರತ ದೇಶದಲ್ಲಿ ಕಾಂಗ್ರೆಸ್​​ ಪಕ್ಷದ ಅಡ್ರೆಸ್ ಇಲ್ಲ, ಎಲ್ಲಾ ರಾಜ್ಯಗಳಲ್ಲೂ ನಿರ್ಮೂಲನೆ ಆಗಿ ಕಾಂಗ್ರೆಸ್​​ ಮುಕ್ತ ಆಗಿದೆ. ಕರ್ನಾಟಕದಲ್ಲೂ ನೂರಕ್ಕೆ ನೂರು ಕರ್ನಾಟಕ ಮುಕ್ತ ಕಾಂಗ್ರೆಸ್ ಆಗಲಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಿಡ್ನಾಪ್ ಹುನ್ನಾರ ಆರೋಪ: ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ದೂರು

ಕ್ಷೇತ್ರದ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ: ಯಾವ ಸಮೀಕ್ಷೆ ತೆಗೆದೊಂಡು ಏ‌ನು ಮಾಡೋದಿದೆ, ಹೊನ್ನಾಳಿ ಕ್ಷೇತ್ರದಲ್ಲಿ ವಾತಾವರಣ ಬದಲಾವಣೆಯಾಗುತ್ತಿದೆ, ಮತದಾರರು ಕಾಂಗ್ರೆಸ್ ಮುಕ್ತ ಸಮಾಜ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. 2013ರಲ್ಲಿ ಮೂರು ಭಾಗ ಆಗಿದ್ದರಿಂದ ಹಿನ್ನಡೆಯಾಯಿತು, 2018ರಲ್ಲಿ 15 ದಿನ ಮುಂಚೆ ಆಯ್ಕೆ ಆಗಿದ್ದೇನೆ ಎಂದು ಹೇಳಿದ್ದೆ. ಈ ಬಾರಿ ಕೂಡ ಗೆಲುವು ಸಾಧಿಸುವೆ, ಸಾಕಷ್ಟು ಜನ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ. ಮಾಜಿ ಶಾಸಕ ಡಿಜಿ ಶಾಂತನ ಗೌಡರ ಮಗ ನಮ್ಮ ಕಾರ್ಯಕರ್ತರಿಗೆ ಬಲವಂತವಾಗಿ ಕಾಂಗ್ರೆಸ್​​ ಪಕ್ಷದ ಶಲ್ಯವನ್ನು ಹಾಕುತ್ತಿದ್ದಾರೆ. ಈ ಬಾರಿ ಪ್ರತಿಯೊಂದು ಸಮಾಜದವರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದ್ರು.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: 2018ಕ್ಕೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ.. ADR ವರದಿ

ಹೊನ್ನಾಳಿಗೆ ಡಿಕೆಶಿ ಭೇಟಿ: ಚುನಾವಣಾ ಪ್ರಚಾರ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಶುಕ್ರವಾರ ಹೊನ್ನಾಳಿಗೆ ಆಗಮಿಸಿ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿ ಡಿಜಿ ಶಾಂತನಗೌಡ ಪರ ಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ.

ಇದನ್ನೂ ಓದಿ: "ದಿ ಕೇರಳ ಸ್ಟೋರಿ" ಮೂವರು ಯುವತಿಯರ ನೈಜ ಕಥೆ ಆಧರಿಸಿದೆ; ಟ್ರೇಲರ್‌ನ ವಿವರಣೆ ಬದಲಾಯಿಸಿದ ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.